ETV Bharat / state

ಅನೈತಿಕ ಸಂಬಂಧ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದಿದ್ದ ಪತ್ನಿ ಸೇರಿ ಮೂವರ ಬಂಧನ - ಕೊಲೆ ಪ್ರಕರಣ ಮೂವರು ಆರೋಪಿಗಳ ಬಂಧನ

ಪ್ರಿಯಕರನ ಜತೆ ಸೇರಿ ತಾಳಿ ಕಟ್ಟಿದ ಗಂಡನನ್ನೆ ಕೊಲೆ ಮಾಡಿದ ಆರೋಪದಡಿ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

Murder Case three Accused
ಕೊಲೆ ಪ್ರಕರಣ ವಿಜಯಪುರದಲ್ಲಿ ಮೂವರು ಆರೋಪಿಗಳ ಬಂಧನ
author img

By

Published : Jun 13, 2022, 9:31 AM IST

ವಿಜಯಪುರ: ಅನೈತಿಕ ಸಂಬಂಧ ಹಿನ್ನೆಲೆ ಗಂಡನನ್ನು ಹತ್ಯೆ ಮಾಡಿದ ಆರೋಪದಡಿ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ವಿಜಯಪುರ ನಗರದ ಸಾಯಿ ಪಾರ್ಕ್ ಬಳಿ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ವರಿ ಹಳ್ಳಿ, ರವಿ ತಳವಾರ ಹಾಗೂ ಗುರಪ್ಪ ದಳವಾಯಿ ಬಂಧಿತ ಆರೋಪಿಗಳು. ಪ್ರಕಾಶ ಹಳ್ಳಿ ಕೊಲೆಯಾದವರು. ಆತನ ಪತ್ನಿ ರಾಜೇಶ್ವರಿ ಹಾಗೂ ಸಹಚರರು ಸೇರಿ ಕೊಂಡು ಹತ್ಯೆ ಮಾಡಿದ್ದರು ಎನ್ನಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ​302 ಅಡಿ ಜಲನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಹಿನ್ನೆಲೆ: ವಿಜಯಪುರ ನಗರದ ಏಕತಾ ಕಾಲೋನಿಯ ನಿವಾಸ ಪ್ರಕಾಶ ಹಳ್ಳಿ ಅವರು ಇದೇ ಜೂ. 8ರಂದು ಅವರ ಮನೆಯ ಬೆಡ್ ರೂಂನಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಜಲನಗರ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ಮೃತ ಪ್ರಕಾಶ ತಂದೆ ಲಕ್ಷಣ ಹಳ್ಳಿ ತಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಇದರಲ್ಲಿ ನನ್ನ ಸೊಸೆ ರಾಜೇಶ್ವರಿ ಕೈವಾಡವಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆ ಪೊಲೀಸರು ಮೃತನ ಪತ್ನಿ ಹಾಗೂ ಅವರ ಇಬ್ಬರು ಸ್ನೇಹಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದರು. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿರುವ ಕಾರಣ ಕೊಲೆ ನಡೆದಿದೆ ಎಂದು ತನಿಖೆ ವೇಳೆ ದೃಢಪಟ್ಟ ಕಾರಣ ಮೂವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಗ್ಯಾಂಗ್​ಸ್ಟರ್​ನಿಂದ ಯುವಕನ ಮೇಲೆ ಗುಂಡು.. ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.