ವಿಜಯಪುರ: ರಾಶಿ ಮಷಿನ್‌ಗೆ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮನಗೂಳಿಯಲ್ಲಿ ನಡೆದಿದೆ. ಕೆಲಸಕ್ಕೆ ಹೋದ ವೇಳೆ ಈ ಅವಘಡ ಸಂಭವಿಸಿದೆ. ಮೆಕ್ಕೆ ಜೋಳದ ರಾಶಿ ಮಾಡುವಾಗ ಆಯತಪ್ಪಿ ಮಷಿನ್‌ಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ.
ಭೀಮವ್ವ ಸಬು ಉಕ್ಕಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಡೋಣುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುನ್ನಾ ಡೋಣುರ ಎಂಬುವವರ ತೋಟದಲ್ಲಿ ಕೆಲಸ ಮಾಡುವಾಗ ಮಷಿನ್‌ಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಪ್ರೇಮ ವಿವಾಹ.. ಸೊಸೆಯಾಗಿ ಒಪ್ಪದ ಕುಟುಂಬಸ್ಥರು: ಗರ್ಭಿಣಿ ಪತ್ನಿ ಜೊತೆಗೆ ಯುವಕ ಆತ್ಮಹತ್ಯೆ