ETV Bharat / state

ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮಲತಾಯಿ ಬಂಧನ - ಮಗುವನ್ನು ಕೊಲೆ ಮಾಡಿದ್ದ ಮಲತಾಯಿ

ತನ್ನ ಸಂಸಾರಕ್ಕೆ ಮೊದಲನೇ ಹೆಂಡತಿಯ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ಒಂದು ಮಗುವನ್ನು ಸಾಯಿಸಿ ಇನ್ನೊಂದು ಮಗುವನ್ನು ಕೊಲ್ಲಲು ಯತ್ನಿಸಿದ್ದ ಮಲತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ಇಂದು ಬಂಧಿಸಿದ್ದಾರೆ.

woman-arrested-for-killing-her-step-sons
ಮಲತಾಯಿ ಬಂಧನ
author img

By

Published : Dec 11, 2021, 6:17 PM IST

ವಿಜಯಪುರ: ಮೊಬೈಲ್​ ಚಾರ್ಜರ್​ ವೈರ್​ನಿಂದ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದ ಮಲತಾಯಿಯನ್ನು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಮಿಂಚನಾಳ ತಾಂಡಾದಲ್ಲಿ 5 ವರ್ಷದ ಗಂಡು ಮಗುವನ್ನು ಮೊಬೈಲ್​​ ಚಾರ್ಚರ್ ವೈರ್​​​ ಮೂಲಕ ಕತ್ತು ಹಿಸುಕಿ ಕ್ರೂರಿ ಮಲತಾಯಿ ಕೊಲೆ ಮಾಡಿದ್ದಳು. ಅಲ್ಲದೇ, 3 ವರ್ಷದ ಬಾಲಕನನ್ನು ಸಹ ಹತ್ಯೆ ಮಾಡಲು ಯತ್ನಿಸಿದ್ದಳು. ನಿನ್ನೆಯೇ ವಶಕ್ಕೆ ಪಡೆದಿದ್ದ ಮಹಿಳೆಯ ವಿಚಾರಣೆ ನಡೆಸಿದ ಪೊಲೀಸರು ಇಂದು ಬಂಧನ ಮಾಡಿದ್ದಾರೆ. ಸವಿತಾ ವಿನೋದ್​ ಚವ್ಹಾಣ್​​ ಬಂಧಿತ ಮಲತಾಯಿ.

ಓದಿ-ಮದುವೆಯಾದ ಎರಡೇ ತಿಂಗಳಿಗೆ 5 ವರ್ಷದ ಬಾಲಕನನ್ನು ಕೊಂದ ಮಲತಾಯಿ

ತನ್ನ ಸಂಸಾರಕ್ಕೆ ಮೊದಲನೇ ಹೆಂಡತಿಯ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ಸಮೀತ್ ಹಾಗೂ ಸಂಪತ್‌ ಅನ್ನು ಹತ್ಯೆ ಮಾಡಲು ಸಂಚು ರೂಪಿಸಿ ಸಮೀತನನ್ನು ಕೊಲೆ ಮಾಡಿ, ನಂತರ ಸಂಪತನನ್ನು ಸಹ ಕೊಲೆ ಮಾಡಲು ಯತ್ನಿಸಿದ್ದಳು. ಸದ್ಯ ಬಾಲಕ ಸಂಪತ ಜೀವನ್ಮರಣ ಹೊರಾಟ ನಡೆಸುತ್ತಿದ್ದಾನೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.