ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವ್ಯಕ್ತಿಯೊಬ್ಬರ ಮನೆ ಮುಂದೆ ವಾಮಾಚಾರ ಮಾಡಿರುವ ಘಟನೆ ನಡೆದಿದೆ.
ಮಹಾಂತೇಶ ಹಿರೇಮಠ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ನಲ್ಲಿ ತಾಮ್ರದ ತಗಡು, ಕುಂಕುಮ, ಕ್ಯಾರು, ಕವಡಿ, ನಿಂಬೆಹಣ್ಣು, ಕರಿಮಣಿ ಕಟ್ಟಿ ಹೋಗಿದ್ದು, ನಾಡಗೌಡರ ಬಡಾವಣೆಯ ಜನರಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆಯೂ ಕೂಡ ಇಂತಹದ್ದೇ ಘಟನೆ ನಡೆದಿತ್ತು.