ETV Bharat / state

ಹತ್ತು ವರ್ಷಗಳಿಂದ ಆ ಗ್ರಾಮಕ್ಕಿಲ್ಲ ನೀರಿನ ವ್ಯವಸ್ಥೆ...ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ - undefined

ಬಿಜ್ಜೂರ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಕುಡಿವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಗ್ರಾಮ ಪಂಚಾಯತಿ ಅಧಿಕಾರಿಗಳು ಮಾತ್ರ ಕುಡಿಯುವ ನೀರು ಕಲ್ಪಿಸುವ ಗೋಜಿಗೆ ಹೋಗುತ್ತಿಲ್ಲ.

ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು
author img

By

Published : May 22, 2019, 9:37 PM IST

ವಿಜಯಪುರ: ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದ್ದು, ಕಳೆದ ಹತ್ತು ವರ್ಷಗಳಿಂದ ಆ ಗ್ರಾಮಕ್ಕೆ ಕುಡಿವ ನೀರಿನ ಸಮಸ್ಯೆ ಮಾತ್ರ ಕಟ್ಟಿಟ್ಟ ಬುತ್ತಿಯಾಗಿದೆ.

ಹೌದು... ಜಿಲ್ಲೆಯ ಮುದ್ದೇಬಿಹಾಳ‌ ತಾಲೂಕಿನ ಬಿಜ್ಜೂರ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇನ್ನು ಬಗೆಹರಿದಿಲ್ಲ. ಗ್ರಾಮದಿಂದ ಕೇವಲ 1 ಕಿ.ಮೀ ದೂರದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರೂ ಈ ಗ್ರಾಮಸ್ಥರಿಗೆ ಮಾತ್ರ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳು ಕೂಡ ಕುಡಿಯುವ ನೀರು ಕಲ್ಪಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

1600 ಜನ ಇರುವ ಈ ಗ್ರಾಮಕ್ಕೆ ಕೇವಲ ಒಂದು ಶುದ್ಧ ಕುಡಿವ ನೀರಿನ ಘಟಕ ಇದೆ. ಅಲ್ಲಿ‌ ಕೂಡ ಸರಿಯಾದ ನಿರ್ವಹಣೆ ಇಲ್ಲ. ಅಷ್ಟೆ ಅಲ್ಲದೇ ಗ್ರಾಮದಲ್ಲಿ ಕೇವಲ ಒಂದು ಬಾವಿ ಇದ್ದು, ಅದು ಕೂಡ ಕಲುಷಿತ ನೀರಿನಿಂದ ತುಂಬಿ ಹೋಗಿದೆ. ಅದೇ ನೀರು ಕುಡಿದು ಜನ ಬದುಕುತ್ತಿದ್ದಾರೆ. ಆ ಬಾವಿ ಸುತ್ತ ಮುತ್ತ ಬರೀ ಗಲೀಜು, ಗಬ್ಬು ವಾಸನೆ. ಕುಡಿವ ನೀರಿನ ಬಾವಿ‌ ಸುತ್ತ ಸ್ವಚ್ಛವಾಗಿಡಬೇಕೆಂದು ಸೂಚಿಸಿದ್ದರೂ ಗ್ರಾಮ ಪಂಚಾಯತಿ ಅಧಿಕಾರಿಗಳು ಮಾತ್ರ ತಮ್ಮದೇ ದರ್ಬಾರ್​ ನಡೆಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಗ್ರಾಮಸ್ಥರು.

ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು

ಇನ್ನು ಸಂಗೊಳ್ಳಿರಾಯಣ್ಣ ವೃತ್ತದಿಂದ ದುರ್ಗಮ್ಮ ದೇವಿ ದೇವಸ್ಥಾನ ಅಡಿ ಬರುವ ಮನೆಗಳಿಗೆ ಈವರೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇಲ್ಲಿಯ ಜನರು ಅನೇಕ ಮೈಲಿ ವರೆಗೆ ನಡೆದುಕೊಂಡು ಹೋಗಿ ನೀರು ತರುವಂತ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಬೌಹಳ್ಳಿ ಯೋಜನೆ ಅಡಿ ನದಿಯಿಂದ ಪೈಪ್​ ಲೈನ್ ಮಾಡುವ ಯೋಜನೆ ಅರ್ಧಕ್ಕೆ ನಿಂತು ಹೋಗಿದೆ. ಅದನ್ನು ಸರಿಪಡಿಸುವಲ್ಲೂ ಗ್ರಾಮ ಪಂಚಾಯತಿ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ‌ ಜನ ಪ್ರತಿನಿಧಿಗಳು ಕೊನೇ ಪಕ್ಷ ಟ್ಯಾಂಕರ್​ಗಳ‌ ಮೂಲಕವಾದರೂ ಗ್ರಾಮಕ್ಕೆ ನೀರು ಸರಬರಾಜು ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

Intro:File name: water problem
Formate: av
Reporter: Suraj risaldar
Place: vijaypur
Date: 21-05-2019

Anchor: ಪಂಚ್ ನದಿಗಳ ನಾಡೆಂದೆ ಕರೆಸಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದೆ. ಇಲ್ಲಿ ಹನಿ‌ಹನಿ ನೀರಿಗೂ ತಾಪತ್ರಯ್ಯ ಬಂದೊದಗಿದೆ. ಕಳೆದ ಹತ್ತು ವರ್ಷಗಳಿಂದ ಆಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಮಾತ್ರ ಕಟ್ಟಿಟ್ಟ ಬುತ್ತಿ.....Body:ಹೌದು...ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ‌ ತಾಲೂಕಿನ ಬಿಜ್ಜೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನು ಬಗೆಹರಿದಿಲ್ಲ...ಗ್ರಾಮದಿಂದ ಕೇವಲ 1 ಕಿಲೋ ಮಿಟರ ದೂರದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರೂ ಈ ಗ್ರಾಮಸ್ಥರಿಗೆ ನೀರು ಸಮರ್ಪಕವಾಗಿ ಸಿಗುತ್ತಿಲ್ಲ.. ಗ್ರಾಮ ಪಂಚಾಯತ ಅಧಿಕಾರಿಗಳು ಕೂಡ ಕುಡಿಯುವ ನೀರು ಕಲ್ಪಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ..

ಕೇವಲ 16 ನೂರು ಜನ ಇರುವ ಈ ಗ್ರಾಮಕ್ಕೆ ಕೇವಲ್ ಒಂದು ಶುಧ್ಧ ನೀರಿನ ಘಟಕ ಇದೆ.ಅದು‌ ಕೂಡ ಸರಿಯಾಗಿ ನಿರ್ವಹಣೆ ಇಲ್ಲದೆ ಸೋಸಿ ಹೂಗುತ್ತಿದೆ. ಅಷ್ಟೆ ಅಲ್ಲದೆ ಗ್ರಾಮದಲ್ಲಿ ಕೇವಲ ಒಂದು ಬಾವಿ ಇದೆ..ಅದು ಕೂಡ ಕಲುಷಿತ ನೀರಿಂದ ತುಂಬಿ ಹೋಗಿದೆ..ಅದರ ಸ್ವಚತೆ ಮಾಡುವ ಗೋಜಿಗೂ ಕೂಡ ಗ್ರಾಮ ಪಂಚಾಯತ ಅಧಿಕಾರಿಗಳು ಮನಸು‌ ಮಾಡಿಲ್ಲ.
ಅದೇ ನೀರು ಕುಡಿದು ಜನ ಬದುಕುತ್ತಿದ್ದಾರೆ...ಆ ಬಾವಿ ಸುತ್ತ ಮುತ್ತ ಬರೀ ಗಲೀಜು..ಗಬ್ಬು ವಾಸನೆ...ಹೀಗೆ ಬಾವಿ ಸುತ್ತ ಕೆಟ್ಟ ಹೋದ ವಾತಾವರಣ...ಸರ್ಕಾರದ ನಿಯಮ ಪ್ರಕಾರ ಕುಡಿಯುವ ನೀರಿನ ಬಾವಿ‌ಸುತ್ತ ಸ್ವಚತೆಯನ್ನು ಇಡಬೇಕು ಅಂತ ಗ್ರಾಮ ಪಂಚಾಯತಿಗೆ ಸೂಚಿಸಲಾಗಿದೆ..ಆದ್ರೂ ಇಲ್ಲಿ ಗ್ರಾಮ ಪಂಚಾಯತ ಅಧಿಕಾರಿಗಳು ಮಾತ್ರ ತಮ್ಮದೆ ದರ್ಬಾರ ನಡೆಸಿದ್ದಾರೆ..ಎಷ್ಟು ಸಲ ಈ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಗ್ರಾಮಸ್ಥರು..Conclusion:ಇನ್ನೂ ಸಂಗೊಳ್ಳಿರಾಯನ್ನ ವೃತ್ ದಿಂದ ದುರ್ಗಮ್ಮ ದೇವಿ ದೇವಸ್ಥನ ಅಡಿಯಲ್ಲಿ ಬರುವ ಮನೆಗಳಿಗೆ ಇನ್ನೂವರೆಗೂ ನೀರಿನ ನಲ್ಲಿ ಸಂಪರ್ಕಕಲ್ಪಸಿಲ್ಲ..ಇಲ್ಲಿಯ ಜನರು ಸೂಮಾರು ಕಿ.ಮಿ ವರೆಗೆ ನಡೆದುಕೊಂಡು ಹೋಗಿ ನೀರು ತರುವಂತ ಸ್ಥತಿ ನಿರ್ಮಾಣವಾಗಿದೆ ಅಂತಾರೆ ಇಲ್ಲಿಯ ಗ್ರಾಮಸ್ಥರು..ಇನ್ನು ಬೌಹಳ್ಳಿ ಯೋಜನೆ ಅಡಿ ನದಿಯಿಂದ ಪೈಪಲೈನ್ ಮಾಡುವ ಯೋಜನೆ ಅರ್ಧಕ್ಕೆ ನಿಂತು ಹೋಗಿದೆ. ಅದು ಕೂಡ ತಯಾರ ಮಾಡುವಲ್ಲಿ ಗ್ರಾಮಪಂಚಾಯತ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಅಂತಾರೆ ಇಲ್ಲಿಯ ಜನರು...ಕೂಡಲೇ ಸಂಬಂಧ ಪಟ್ಟ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ‌ ಜನಪ್ರತಿನಿಧಿಗಳು ಎಟ್ಲಿಸ್ಟ್ ಟ್ಯಾಂಕರಗಳ‌ ಮೂಲಕ ವಾದ್ರೂ ಗ್ರಾಮಕ್ಕೆ ನೀರು ಸರಬರಾಜು ಮಾಡ್ಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ...ಇಲ್ಲದಿದ್ದರೆ ಮುಂದೊಂದು ದಿನ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.