ETV Bharat / state

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮತ್ತೆ ವಿಳಂಬ - Etv Bharat Kannada

ವಿಜಯಪುರ ವಿಮಾನ ನಿಲ್ದಾಣವನ್ನು ಸರ್ಕಾರ ಮೇಲ್ದರ್ಜೆಗೇರಿಸಿದ ಕಾರಣ ಡಿಸೆಂಬರ್​ನಲ್ಲಿ ಮುಗಿಯಬೇಕಿದ್ದ ಕಾಮಗಾರಿ ಏಪ್ರಿಲ್​ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.

Kn_vjp
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ
author img

By

Published : Dec 8, 2022, 9:06 PM IST

ವಿಜಯಪುರ: ಐತಿಹಾಸಿಕ ಪ್ರವಾಸಿ ತಾಣಗಳ ತವರೂರು ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿತ್ತು. ಕಾಮಗಾರಿ ಆದಷ್ಟು ಬೇಗ ಮುಗಿದು ಜನವರಿಯಲ್ಲಿಯೇ ವಿಮಾನ ಹಾರಾಟ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೀಗ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಕೆಲಸ ವಿಳಂಬವಾಗಲಿದೆ.

ಜಿಲ್ಲೆಯ ಬುರಣಾಪುರ ಗ್ರಾಮದ ಬಳಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಡಿಸೆಂಬರ್​ನಲ್ಲಿ ಮುಗಿಯಬೇಕಿದ್ದ ಕೆಲಸವೀಗ ಏಪ್ರಿಲ್‌ವರೆಗೆ ಮುಂದೆ ಹೋಗಿದೆ. ಏರ್ ಬಸ್ 320 ಮೇಲ್ದರ್ಜೆಗೇರಿಸಿರುವುದು ಇದಕ್ಕೆ ಪ್ರಮುಖ‌ ಕಾರಣವಾಗಿದೆ.

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಸಂಸದರಿಂದ ಪ್ರತಿಕ್ರಿಯೆ

ಇಂದು ಸಂಸದ ರಮೇಶ ಜಿಗಜಿಣಗಿ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿದರು. ಬಳಿಕ ಸಂಸದರು ಮಾತನಾಡಿ, ಸರ್ಕಾರ ವಿಮಾನ ನಿಲ್ದಾಣ ಏರ್‌ಬಸ್-320 ಮೇಲ್ದರ್ಜೆಗೇರಿಸಿರುವುದರಿಂದ ಕಾಮಗಾರಿಗಳು ವೇಗ ಪಡೆದುಕೊಂಡಿದೆ. ಏಪ್ರಿಲ್ ಅಂತ್ಯದದಲ್ಲಿ ಕಾಮಗಾರಿ ಮುಗಿಯುವ ವಿಶ್ವಾಸ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ, ಜಿಲ್ಲೆಯ ಆಮದು-ರಫ್ತು ವ್ಯವಹಾರ, ವ್ಯಾಪಾರ ವಹಿವಾಟು, ಸರಕು- ಸಾಗಾಣಿಕೆ ವ್ಯವಸ್ಥೆ ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಅನುಕೂಲವಾಗಲಿದೆ. ನಿಲ್ದಾಣವನ್ನು ಎಟಿಆರ್-72 ರಿಂದ ಏರ್ಸ್ 320 ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಸಹ ಭರದಿಂದ ಸಾಗಿದ್ದು, ಒಟ್ಟು 347.92 ಕೋಟಿ ರೂ.ಗಳ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಮೊದಲನೇ ಹಂತದ ಕಾಮಗಾರಿಗಾಗಿ 222.92 ಕೋಟಿ ರೂ.ಗಳು ಹಾಗೂ ಎರಡನೇ ಹಂತಕ್ಕೆ 125 ಕೊಟಿ ರೂ.ಗಳನ್ನು ನಿಗದಿಪಡಿಸಲಾಗಿದ್ದು, ಎಟಿಆರ್-72 ವಿಮಾನಗಳ ಹಾರಾಟಕ್ಕಾಗಿ 95 ಕೋಟಿ ರೂ. ಹಾಗೂ ಏರ್‌ಬಸ್-320 ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆ‌ಗೇರಿಸಿರುವುದರಿಂದ ಹೆಚ್ಚುವರಿಯಾಗಿ 127.92 ಕೋಟಿ ರೂ.ಗಳ ಕಾಮಗಾರಿ ಚಾಲ್ತಿಯಲ್ಲಿದೆ.

ಇದನ್ನೂ ಓದಿ: ಲ್ಯಾಂಡ್‌ ಬ್ಯಾಂಕ್‌ ಸ್ಥಾಪನೆಗೆ ರಾಜ್ಯ ಸರಕಾರ ಚಿಂತನೆ: ಸಚಿವ ಹಾಲಪ್ಪ ಆಚಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.