ವಿಜಯಪುರ : ಜಿಲ್ಲೆಯಲ್ಲಿ ಈವರೆಗೂ 202 ಕೊರೊನಾ ಪಾಸಿಟಿವ್ ಪ್ರರಕಣ ವರದಿಯಾಗಿವೆ. ಆದರೆ, ಇಂದು ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.
ಈಗಾಗಲೇ 108 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 88 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ 6 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಸದ್ಯ ಕೊರೊನಾ ಶಂಕೆ ಹಿನ್ನೆಲೆ ಜಿಲ್ಲೆಯಲ್ಲಿ 28,736 ಜನರ ಮೇಲೆ ನಿಗಾ ಇರಿಸಲಾಗಿದೆ. ಅದರಲ್ಲಿ 8,433 ಜನರು 28 ದಿನಗಳ ನಿಗಾ ಪೂರೈಸಿದ್ದಾರೆ. 20,189 ಜನರು 28 ದಿನಗಳ ನಿಗಾದಲ್ಲಿದ್ದಾರೆ. ಇನ್ನೂ 26,358 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಅದರಲ್ಲಿ 25,730 ಜನರ ವರದಿ ನೆಗೆಟಿವ್ ಬಂದಿದೆ. 426 ಜನರ ವರದಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.