ETV Bharat / state

ತಮ್ಮ ಜಮೀನುಗಳಿಗೆ ತೆರಳಲು ದಾರಿ ಮಾಡಿಕೊಡಲು ಜಿಲ್ಲಾಧಿಕಾರಿಗಳ ಮೊರೆ ಹೋದ ರೈತರು - District Collector of Vijayapura

ಹಲವು ಬಾರಿ ಅಧಿಕಾರಿಗಳಿಗೆ ದಾರಿ ಸಮಸ್ಯೆ ಕುರಿತಾಗಿ ಮನವರಿಕೆ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಧುನಿಕ ಯಂತ್ರೋಪಕರಣಗಳನ್ನು ಜಮೀನುಗಳಿಗೆ ತೆಗೆದುಕೊಂಡು ಹೋಗುವುದಂತೂ ದೂರದ ಮಾತೇ ಆಗಿದೆ..

Vijayapura: The peasants who had come to request DC to make their way to their land
ತಮ್ಮ ಜಮೀನುಗಳಿಗೆ ತಾವು ತೆರಳಲು ದಾರಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋದ ರೈತರು
author img

By

Published : Sep 14, 2020, 5:08 PM IST

ವಿಜಯಪುರ : ಕೃಷಿ ಚಟುವಟಿಕೆ ನಡೆಸಲು ಗದ್ದೆಗಳಿಗೆ ತೆರಳಲು ದಾರಿ ಮಾಡಿ‌ಕೊಡುವಂತೆ ಅಖಂಡ ಕರ್ನಾಟಕ ರೈತ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ತಮ್ಮ ಜಮೀನುಗಳಿಗೆ ತಾವು ತೆರಳಲು ದಾರಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋದ ರೈತರು

ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ್ ಗ್ರಾಮದ ವ್ಯಾಪ್ತಿಗೆ ಬರುವ ಕಸ.ನಂ 331/1 ಜಮೀನಗಳಗೆ ಹೋಗಲು ಪಕ್ಕದ ಜಮೀನಿನ ರೈತರು ತಕರಾರು ತೆಗೆಯುತ್ತಿದ್ದಾರೆ. ಹೀಗಾಗಿ, ಕೃಷಿ ಚಟುವಟಿಕೆ ನಡೆಸಲು ಕಷ್ಟವಾಗಿದೆ. ರೈತರು ತಮ್ಮ ಜಮೀನುಗಳಿಗೆ ಹೋಗಲು ದಾರಿಯಿಲ್ಲದೆ ಪರದಾಟ ನಡೆಸುವಂತಾಗಿದೆ.

ಹಲವು ಬಾರಿ ಅಧಿಕಾರಿಗಳಿಗೆ ದಾರಿ ಸಮಸ್ಯೆ ಕುರಿತಾಗಿ ಮನವರಿಕೆ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಆಧುನಿಕ ಯಂತ್ರೋಪಕರಣಗಳನ್ನು ಜಮೀನುಗಳಿಗೆ ತೆಗೆದುಕೊಂಡು ಹೋಗುವುದಂತೂ ದೂರದ ಮಾತೇ ಆಗಿದೆ ಎಂದು ರೈತರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು. ರೈತರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್​ ಅವರು, ಜಮೀನುಗಳ ಸರ್ವೇ ಮಾಡಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.