ETV Bharat / state

ವಿಜಯಪುರ: ಎಸ್​​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಗೆ ಬಿ ಶ್ರೇಣಿ - ಕೊರೊನಾ ಭೀತಿ

ಕಳೆದ ವರ್ಷ 26ನೇ ಸ್ಥಾನದಲ್ಲಿದ್ದ ವಿಜಯಪುರ ಈ ವರ್ಷ 25ನೇ ಸ್ಥಾನಕ್ಕೆ ತಲುಪಿದೆ. ಇದೇ ಪ್ರಥಮ ಬಾರಿಗೆ ಜಿಲ್ಲಾವಾರು ಶ್ರೇಣಿ ಮಾದರಿ ನೀಡಿರುವ ಕಾರಣ ವಿಜಯಪುರ ಜಿಲ್ಲೆ ಬಿ ಶ್ರೇಣಿ ಪಡೆದಿದೆ.

vjp
vjp
author img

By

Published : Aug 11, 2020, 1:01 PM IST

ವಿಜಯಪುರ: ಕೊರೊನಾ ಭೀತಿಯ ನಡುವೆಯೂ ನಡೆದ ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ 25ನೇ ಸ್ಥಾನ ಪಡೆದುಕೊಂಡು ಬಿ ಶ್ರೇಣಿ ಪಟ್ಟಿಯಲ್ಲಿ ಸೇರಿಕೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 32,425 ವಿದ್ಯಾರ್ಥಿಗಳಲ್ಲಿ 26,620 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 7412 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.

ಎಸ್​​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜಯಪುರಕ್ಕೆ ಬಿ ಶ್ರೇಣಿ

ಕಳೆದ ವರ್ಷ ವಿಜಯಪುರ ಜಿಲ್ಲೆ 26ನೇ ಸ್ಥಾನದಲ್ಲಿತ್ತು. ಈ ವರ್ಷ 25ನೇ ಸ್ಥಾನ ತಲುಪಿದೆ. ಇದೇ ಪ್ರಥಮ ಬಾರಿಗೆ ಜಿಲ್ಲಾವಾರು ಶ್ರೇಣಿ ಮಾದರಿ ನೀಡಿರುವ ಕಾರಣ ಬಿ ಶ್ರೇಣಿ ಪಡೆದಿರುವದು ಜಿಲ್ಲೆಯ ಮಟ್ಟಿಗೆ ಸಮಾಧಾನ ತಂದಿದೆ.

ತಾಲೂಕುವಾರದಲ್ಲಿ ಸಹ ಬಸವನಬಾಗೇವಾಡಿ ಹೊರತುಪಡಿಸಿ ಉಳಿದ ತಾಲೂಕುಗಳು ಬಿ ಶ್ರೇಣಿ ಪಡೆದುಕೊಂಡಿವೆ. ಬಾಗೇವಾಡಿಗೆ ಮಾತ್ರ ಸಿ ಶ್ರೇಣಿ ಬಂದಿದೆ.

vijayapura sslc result

ಸಿಂದಗಿಯ ಆದರ್ಶ ವಿದ್ಯಾನಿಲಯದ ಅಕ್ಷತಾ ರಾಠೋಡ 625ಕ್ಕೆ 623 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾಳೆ. ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದ ಮಂಜುನಾಥ ನಡಗೌಡ ಹಾಗೂ ಬಸವನ ಬಾಗೇವಾಡಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪಲ್ಲವಿ ಪಾಟೀಲ ತಲಾ 619 ಅಂಕ ಗಳಿಸಿ ನಂತರದ ಸ್ಥಾನ ಗಳಿಸಿದ್ದಾರೆ.

ಜಿಲ್ಲೆಯ ಮೂರು ಟಾಪರ್ಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎನ್ನುವುದು ಹೆಮ್ಮೆಯ ವಿಷಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.