ವಿಜಯಪುರ: ರವಿವಾರದ ಕರ್ಫ್ಯೂ ಬಳಿಕ ಇಂದು ಗುಮ್ಮಟ ನಗರ ಸಹಜ ಸ್ಥಿತಿಯತ್ತ ಮರಳಿದ್ದು, ಜನ ರಂಜಾನ್ ಹಬ್ಬದ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ರಾಜ್ಯ ಸರ್ಕಾರ ಆದೇಶದನ್ವಯ ಶನಿವಾರ ಸಂಜೆ 7 ಗಂಟೆಯಿಂದ ಇಂದು ಬೆಳಿಗ್ಗೆ ( ಸೋಮವಾರ ) 7 ಗಂಟೆವರೆಗೆ 36 ಗಂಟೆಗಳ ಲಾಕ್‌ಡೌನ್ ಬಳಿಕ ರಂಜಾನ್ ಹಬ್ಬದ ವಸ್ತುಗಳ ಖರೀದಿಗೆ ಜನರು ಮನೆಯಿಂದ ಹೊರ ಬಂದಿದ್ದಾರೆ.
ನಗರದ ಗಾಂಧಿ ವೃತ್ತ, ಎಲ್‌ಬಿಎಸ್ ಮಾರುಕಟ್ಟೆ, ಸಿದ್ದೇಶ್ವರ ಮಂದಿರ ರಸ್ತೆ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಜನ್ರು ತರಕಾರಿ, ಹಣ್ಣು, ಹಾಲು, ದಿನಸಿ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳಗೊಂಡಿದೆ.