ವಿಜಯಪುರ: ಗಾಂಜಾ ಬೆಳೆದಿದ್ದ ಎರಡು ಜಮೀನುಗಳ ಮೇಲೆ ಪ್ರತ್ಯೇಕವಾಗಿ ದಾಳಿ ನಡೆಸಿದ ಪೊಲೀಸರು 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮನಗೂಳಿ ಗ್ರಾಮದ ಶಂಕ್ರಪ್ಪ ಕಾಳಗಿ ಎಂಬುವವರ ಹೊಲದ ಮೇಲೆ ಡಿವೈಎಸ್ ಪಿ .ಶಾಂತವೀರ ನೇತೃತ್ವದಲ್ಲಿ ಮನಗೂಳಿ ಪಿಎಸ್ ಐ ಶಿವೂರ ಅವರ ತಂಡ ದಾಳಿ ನಡೆಸಿ 15 ಕೆಜಿ ಗಾಂಜಾ ವಶಪಡಿಸಿಕೊಂಡಿದೆ.
ಇನ್ನು ಸಂಗಮೇಶ ಕಾಳಗಿ ಎಂಬುವವರ ಜಮೀನಿನಲ್ಲಿ 5 ಕೆಜಿ ಸೇರಿದಂತೆ ಒಟ್ಟು 20 ಕೆಜಿ ಗಾಂಜಾ ವಶಪಡಿಸಿಕೊಂಡು ಇಬ್ಬರು ಮಾಲೀಕರನ್ನು ಬಂಧಿಸಿದ್ದಾರೆ.
ಈ ಸಂಬಂಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ.