ವಿಜಯಪುರ: ದ್ರಾಕ್ಷಿ ಜಮೀನಿನಲ್ಲಿ ದಾರಿಯ ಸಲುವಾಗಿ ಓರ್ವ ವ್ಯಕ್ತಿಯನ್ನು ಕೊಲೆಗೈದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಂತೇಶ ಕುಂಬಾರ, ಪರಶುರಾಮ ಕುಂಬಾರ, ರವಿ ಕುಂಬಾರ ಹಾಗು ಶ್ರೀರಕ್ಷ ಚವ್ಹಾಣ ಬಂಧಿತರು. ಅಶೋಕ ಕಂಬಾರ ಕೊಲೆಯಾದ ದುರ್ದೈವಿಯಾಗಿದ್ದಾರೆ.
ಆರೋಪಿಗಳು ಅಶೋಕ ಕುಂಬಾರನನ್ನು ಬಡಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಕೃತ್ಯಕ್ಕೆ ಬಳಸಿದ ಬಡಿಗೆ, ಕಾರು, ಬೈಕ್, ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವನಬಾಗೇಬಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪತಿಯೊಂದಿಗೆ ಜಗಳ: ಆರು ಮಕ್ಕಳ ಕೊಂದು ಬಾವಿಗೆ ಎಸೆದ ಪಾಪಿ ತಾಯಿ