ವಿಜಯಪುರ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌವ್ಹಾಣ್ ತಡೆದ ಘಟನೆ ನಗರದ ಹೊರ ಭಾಗದಲ್ಲಿನ ಸೊಲ್ಲಾಪುರ ರಸ್ತೆ ಎನ್ ಎಸ್ 13 ರಲ್ಲಿ ನಡೆದಿದೆ.
ಶಾಸಕರು ಕಾರ್ಯಕ್ರಮ ಮುಗಿಸಿಕೊಂಡು ಹೋಗುವಾಗ, ಸಿಂದಗಿ ರಸ್ತೆ ಮಾರ್ಗವಾಗಿ ಸೊಲ್ಲಾಪುರದತ್ತ ಹೊರಟಿದ್ದ ಮರಳು ತುಂಬಿದ್ದ ಸಂಶಯಾಸ್ಪದ ಲಾರಿಯನ್ನು ತಡೆದು ವಿಚಾರಿಸಿದ್ದಾರೆ. ಮರಳು ಸಾಗಾಟ ಮಾಡಲು ಕಳೆದ ಜೂನ್. 24 ಹಳೆಯ ಪಾಸ್ನನ್ನು ಚಾಲಕ ಹೊಂದಿದ್ದ. ಈ ಪಾಸ್ ಮೇಲೆಯೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಅಕ್ರಮ ಮರಳು ಸಾಗಾಟ ಮಾಡುವ ಲಾರಿಯನ್ನು ಆದರ್ಶ ನಗರ ಪೊಲೀಸರಿಗೆ ಶಾಸಕ ಚವ್ಹಾಣ ಒಪ್ಪಿಸಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಕೂಡಲೇ ಸರ್ಕಾರ ವಿಜಯಪುರ ಜಿಲ್ಲೆಯಲ್ಲಿನ ಅಕ್ರಮ ಮರಳುಗಾರಿಕೆಯನ್ನು ತಡೆಯಬೇಕೆಂದು ಶಾಸಕ ದೇವಾನಂದ ಚೌವ್ಹಾಣ್ ಒತ್ತಾಯಿಸಿದ್ದಾರೆ. ಈ ಸಂಬಂಧ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.