ETV Bharat / state

ತಾವೇ ನಿಯಮ ಉಲ್ಲಂಘಿಸಿ, ಜನರಿಗೆ ಪಾಲಿಸಿ ಎಂದರೆ ಹೇಗೆ ಪಾಟೀಲ್​ ನಡಹಳ್ಳಿಯವರೇ?

ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲಿಯೂ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಮುಂಜಾಗೃತೆ ಕ್ರಮ ಕೈಗೊಳ್ಳಬೇಕಾದ ಶಾಸಕ ಎ.ಎಸ್​.ಪಾಟೀಲ್ ನಡಹಳ್ಳಿ ಮಾತ್ರ ಸಾಮೂಹಿಕವಾಗಿ ಅಂತರ ಕಾಪಾಡಿಕೊಳ್ಳದೆ ಡಾ. ಬಿ. ಆರ್​. ಅಂಬೇಡ್ಕರ್​ ಜಯಂತಿ ಆಚರಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

vijayapura-mla-as-naduhalli-break-the-lock-down-rules
ಎ. ಎಸ್​. ಪಾಟೀಲ್​ ನಡಹಳ್ಳಿ
author img

By

Published : Apr 14, 2020, 1:26 PM IST

ವಿಜಯಪುರ: ಜಿಲ್ಲೆಯಲ್ಲಿ 6 ಕೊರೊನಾ ಪ್ರಕರಣಗಳು ದಾಖಲಾಗಿದ್ದರೂ ಸಹ ಬಿಜೆಪಿ ಶಾಸಕ ಎ.ಎಸ್​.ಪಾಟೀಲ್​ ನಡಹಳ್ಳಿಯವರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಲಾಕ್​ಡೌನ್​ ನಿಯಮ ಉಲ್ಲಂಘನೆ ಮತ್ತು ಅಂತರ ಕಾಯ್ದುಕೊಳ್ಳದೆ ಸಾಮೂಹಿಕವಾಗಿ ಅಂಬೇಡ್ಕರ್​ ಜಯಂತಿ ಆಚರಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಲಾಕ್​ಡೌನ ನಿಯಮ ಉಲ್ಲಂಘನೆ ಮಾಡಿದ ಶಾಸಕ ಎ. ಎಸ್​. ಪಾಟೀಲ್​ ನಡಹಳ್ಳಿ

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಸಾಮಾಜಿಕ ಅಂತರ ಕಾಪಾಡದೇ ಎಲ್ಲರ ಮಧ್ಯೆ ನಿಂತು ಶಾಸಕರು ಭಾಷಣ ಮಾಡಿದ್ದಾರೆ. ಕೆಲವರು ಮಾಸ್ಕ್ ಕೂಡಾ ಧರಿಸದೆ ಉದಾಸೀನ ಪ್ರವೃತ್ತಿ ತೋರಿದ್ದಾರೆ.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ. ಎಸ್. ಮಳಗಿ, ಇನ್ಸ್‌ಪೆಕ್ಟರ್ ಆನಂದ ವಾಗ್ಮೋರೆ, ಪುರಸಭೆ ಆಧಿಕಾರಿಗಳು, ಸದಸ್ಯರೂ ಸಹ ಭಾಗಿಯಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜಾವಾಬ್ದಾರಿ ತೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.