ವಿಜಯಪುರ: ಕೊರೊನಾ ಸೋಂಕಿನಿಂದ ಗುಣಮುಖರಾದ ನಾಲ್ಕು ಜನರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಮಹಾಮಾರಿ ಕೊರೊನಾದಿಂದ ಬಿಡುಗಡೆಯಾದವರಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಹಾಗೂ ಓರ್ವ ಬಾಲಕಿ ಇದ್ದು, ಗುಣಮುಖರಾದ ಇವರನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬಿಳ್ಕೊಡಿಗೆ ನೀಡಿದರು.
ಇನ್ನೂ ಕೊರೊನಾದಿಂದ ಮುಕ್ತಳಾದ 11 ವರ್ಷದ ಬಾಲಕಿ ರಕ್ತ ಹಿನತೆ ಸಂಬಂಧಿತ (ಫಲಸ್ಸಿಅಮಿಯಾ ಮೇಜರ್) ಕಾಯಿಲೆಯಿಂದ ಬಳಲುತ್ತಿದ್ದಳು. ಆನುವಂಶಿಕವಾಗಿ ಬರುವ ಕಾಯಿಲೆಯಾಗಿದ್ರಿಂದ ಬಾಲಕಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲಿನ ಕಾರ್ಯವಾಗಿತ್ತು. ಕೊರೊನಾ ವೈರಸ್ ತಗುಲಿ ಬಾಲಕಿ ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಾದ ಸಮಯಲ್ಲಿ ಬಾಲಕಿಯಲ್ಲಿ ಹಿಮೋಗ್ಲೋಬಿನ್ ಪ್ರಾಮಾಣ ಕೇವಲ 3.5 ಗ್ರಾಂ. ನಷ್ಟು ಇತ್ತು. ಆದ ಆಕೆಗೆ ಕಾರಣ ಚಿಕಿತ್ಸೆ ನೀಡುವುದು ಕಷ್ಟವಾಗಿತ್ತು. ಬಾಲಕಿಗೆ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ತಜ್ಞರು ವಿಶೇಷವಾಗಿ ಚಿಕಿತ್ಸೆ ನೀಡಿ ಆರೈಕೆ ಮಾಡಿದರು. ಇಂದು ಬಿಡುಗಡೆ ಸಮಯದಲ್ಲಿ ಬಾಲಕಿಯನ್ನು ಮತ್ತೆ ತಪಾಸಣೆಗೆ ಒಳಪಡಿಸಿದಾಗ ಹಿಮೋಗ್ಲೋಬಿನ್ ಪ್ರಮಾಣ 8.5 ಗ್ರಾಂ ನಷ್ಟು ಹೆಚ್ಚಾಗಿದ್ದು, ವೈದ್ಯರು ಹರ್ಷ ವ್ಯಕ್ತಪಡಿಸಿದರು.
ಇನ್ನೂ ಬಾಲಕಿಯ 14 ದಿನಗಳ ಕ್ವಾರಂಟೈನ್ ಸಮಯದಲ್ಲಿ ಆಕೆಯ ಆರೋಗ್ಯದ ಮೇಲೆ ವೈದ್ಯರು ಹೆಚ್ಚಿನ ನಿಗಾ ವಹಿಸಲಿದ್ದಾರೆ.ಇದುವರೆಗೂ ಜಿಲ್ಲಾಸ್ಪತ್ರೆಯಿಂದ 41 ಕೊರೊನಾ ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.