ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಕೃಷ್ಣಾ ನದಿಯ ಉಗಮ ಸ್ಥಳಕ್ಕೆ ತೆರಳಿದ್ದ ಜಿಲ್ಲೆಯ ರೈತರು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರವಾಸಿ ತಾಣ ಮಹಾಬಲೇಶ್ವರದಲ್ಲಿ ಕೃಷ್ಣಾ ನದಿಯ ಉಗಮ ಸ್ಥಾನವಿದೆ. ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ದಂಪತಿ ನೇತೃತ್ವದಲ್ಲಿ ರೈತರು ಮಹಾಬಲೇಶ್ವರಕ್ಕೆ ತೆರಳಿ ಕೃಷ್ಣೆಗೆ ಬಾಗಿನ ಅರ್ಪಿಸಿದ್ದಾರೆ.
ವಿಜಯಪುರ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಸಂಸ್ಕೃತಿ ಇದೆ. ಆದರೆ ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಬಾಗಿನ ಅರ್ಪಿಸಲು ಅವಕಾಶ ನೀಡಿರಲಿಲ್ಲ. ಈ ವರ್ಷ ಕೋವಿಡ್ ನಿಯಂತ್ರಣದಲ್ಲಿರುವ ಕಾರಣ ನದಿಗೆ ಬಾಗಿನ ಅರ್ಪಿಸಲು ಅವಕಾಶ ನೀಡಿದ್ದು, ರೈತರು ಮಹಾಬಲೇಶ್ವರಕ್ಕೆ ತೆರಳಿದ್ದರು.
ಇದನ್ನೂ ಓದಿ: ಬಳ್ಳಾರಿ: ತುಂಬಿದ ತುಂಗಾಭದ್ರಾ ಜಲಾಶಯ.. ಬಾಗಿನ ಅರ್ಪಿಸಿದ ಸಚಿವ ಆನಂದ್ ಸಿಂಗ್