ETV Bharat / state

ಅಧಿವೇಶನದಲ್ಲಿ ವಿಜಯಪುರ ಭೂಕಂಪನ ವಿಷಯ ಪ್ರಸ್ತಾಪ : ಶಾಸಕ ಶಿವಾನಂದ ಪಾಟೀಲ್​ ಹೇಳಿಕೆ

author img

By

Published : Nov 14, 2021, 5:40 PM IST

ಕೊಯ್ನಾ ಜಲಾಶಯ ಸುತ್ತಮುತ್ತ ಭೂಮಿ ಕಂಪನದ ಅನುಭವವಾಗುತ್ತಿರುವುದನ್ನು ಕೇಳಿದ್ದೇವೆ. ಅದೇ ರೀತಿ ನಮ್ಮ ಭಾಗದಲ್ಲಿ ಆಲಮಟ್ಟಿ ಜಲಾಶಯವಿರುವ ಕಾರಣ ಈ ರೀತಿ ಭೂಮಿ‌ ಕಂಪನದ ಅನುಭವವಾಗುತ್ತಿರಬಹುದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ..

vijayapura-earthquake-topic-will-discuses-in-monsoon-session
ಶಾಸಕ ಶಿವಾನಂದ ಪಾಟೀಲ್​

ವಿಜಯಪುರ : ಜಿಲ್ಲೆಯ ಬಸವನಬಾಗೇವಾಡಿ ಹಾಗೂ ವಿಜಯಪುರ ತಾಲೂಕಿನಲ್ಲಿ ಪದೇಪದೆ ಭೂಮಿ ಕಂಪನ (Vijayapura earthquake) ಕುರಿತು ತಜ್ಞರು ಸಮಗ್ರ ಪರಿಶೀಲನೆ ನಡೆಸಬೇಕೆಂದು ಬೆಳಗಾವಿಯ ಸುವರ್ಣಸೌಧದಲ್ಲಿ (Suvarna Vidhana Soudha) ನಡೆಯಲಿರುವ ಚಳಿಗಾಲದ ಅಧಿವೇಶನಲ್ಲಿ ವಿಶೇಷವಾಗಿ ಪ್ರಸ್ತಾಪಿಸುವುದಾಗಿ ಬಸವನಬಾಗೇವಾಡಿಯ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ (MLA Shivanand patil) ಹೇಳಿದರು.

ಅಧಿವೇಶನದಲ್ಲಿ ವಿಜಯಪುರ ಭೂಕಂಪನ ವಿಷಯ ಪ್ರಸ್ತಾಪ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ನಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಭೂಮಿ ಕಂಪನದ ಅನುಭವವಾಗುತ್ತಿದೆ. ಇದಕ್ಕೆ ಏನು ಕಾರಣ ಎನ್ನುವ ಕುರಿತು ಮೂರು ಬಾರಿ ತಜ್ಞರ ತಂಡ ಬಂದು ಪರಿಶೀಲನೆ ನಡೆಸಿದೆ. ಆದರೆ, ವರದಿ ಇನ್ನೂ ಜಿಲ್ಲಾಧಿಕಾರಿಯ ಮಟ್ಟದಲ್ಲಿದೆ. ತಮಗೆ ಯಾವುದೇ ಪ್ರಾಥಮಿಕ ವರದಿ ಸಲ್ಲಿಕೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕೊಯ್ನಾ ಜಲಾಶಯ ಸುತ್ತಮುತ್ತ ಭೂಮಿ ಕಂಪನದ ಅನುಭವವಾಗುತ್ತಿರುವುದನ್ನು ಕೇಳಿದ್ದೇವೆ. ಅದೇ ರೀತಿ ನಮ್ಮ ಭಾಗದಲ್ಲಿ ಆಲಮಟ್ಟಿ ಜಲಾಶಯವಿರುವ ಕಾರಣ ಈ ರೀತಿ ಭೂಮಿ‌ ಕಂಪನದ ಅನುಭವವಾಗುತ್ತಿರಬಹುದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ಇದನ್ನು ತಜ್ಞರು ಪರಿಶೀಲನೆ ನಡೆಸಿ ಹೇಳಬೇಕು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಲಿದ್ದೇನೆ. ಇದಕ್ಕೆ ಸರ್ಕಾರದ ಪ್ರತಿಕ್ರಿಯೆ ನೋಡಿ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ತಿಳಿಸಿದರು.

ವರಿಷ್ಠರಿಗೆ ಬಿಟ್ಟಿದ್ದು: ಜಿಲ್ಲೆಯಲ್ಲಿ ದ್ವಿಸದಸ್ಯ ಸ್ಥಾನಕ್ಕೆ ವಿಧಾನ ಪರಿಷತ್ ಚುನಾವಣೆ (legislative council election 2021) ನಡೆಯಲಿದೆ. ಆದ್ರೆ, ಒಂದೇ ಸ್ಥಾನಕ್ಕೆ ಸ್ಪರ್ಧೆ ನಡೆಸುವುದು ಸೂಕ್ತ ಎನ್ನುವುದನ್ನು ಈ ಭಾಗದ ಜನಪ್ರತಿನಿಧಿಗಳು ವರಿಷ್ಠರ ಗಮನಕ್ಕೆ ತಂದಿದ್ದೇವೆ. ಇನ್ನೆರಡು ದಿನದಲ್ಲಿ ವರಿಷ್ಢರು ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು. ಈ ಬಾರಿ ಕಾಂಗ್ರೆಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆಯಾ? ಎನ್ನುವ ಪ್ರಶ್ನೆಗೆ ಇದೇನು ಹೊಸದಲ್ಲ, ಪ್ರತಿಸಲ ನಡೆಸುವ ತರಬೇತಿ ಅಷ್ಟೇ ಎಂದು ಜಾಣ್ಮೆಯ ಉತ್ತರ ನೀಡಿದರು.

ಪ್ರತಿಕ್ರಿಯೆಗೆ ನಿರಾಕರಣೆ : ಬಿಟ್ ಕಾಯಿನ್ ಹಗರಣ (Bitcoin scam) ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶಾಸಕ ಪಾಟೀಲ, ಅದನ್ನು ವರಿಷ್ಠರು ನೋಡಿಕೊಳ್ಳುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.