ವಿಜಯಪುರ: ಕೋವಿಡ್ ನಿಯಮ ಉಲ್ಲಂಘಿಸಿ ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಶ್ರೀ ರೇವಣ ಸಿದ್ಧೇಶ್ವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೊರೊನಾ ಹಾಗೂ ಬ್ಲ್ಯಾಕ್ ಫಂಗಸ್ ಭೀತಿಯ ನಡುವೆ ರೇವಣ ಸಿದ್ಧೇಶ್ವರ ಜಾತ್ರೆ ಆಚರಿಸಿದ್ದಾರೆ. ಭಕ್ತರು ಹಾಗೂ ಗ್ರಾಮಸ್ಥರು ಕೂಡಿಕೊಂಡು ಸಾಮಾಜಿಕ ಅಂತರ ಮರೆತು ಬಡಿಗೆ ಜಾತ್ರೆ ಆಚರಣೆ ಮಾಡಿದ್ದಾರೆ.
ಸದ್ಯ ಕಂಡು ಕಾಣದಂತಿರುವ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಕುರುಡು ನಡೆಗೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.