ETV Bharat / state

ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಡಿಸಿ

ವಿಜಯಪುರದಲ್ಲೂ ಕೊರೊನಾ 7 ಪ್ರಕರಣಗಳು ಕಂಡುಬಂದಿದ್ದು, ಜನ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ರೈತರು ತರಕಾರಿ ತಂದು ಮಾರಲೂ ಸಹ ಹಿಂದೇಟು ಹಾಕುತ್ತಿದ್ದಾರೆ.

Vijayapura District Corona Update by District Collector of Y. S.  Patila
ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲರಿಂದ ಜಿಲ್ಲೆಯ ಕೊರೊನಾ ಅಪ್ಡೇಟ್​
author img

By

Published : Apr 15, 2020, 2:51 PM IST

ವಿಜಯಪುರ: ಜಿಲ್ಲೆಯಲ್ಲಿರುವ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳು, ಕೊರೊನಾ ನಿಯಂತ್ರಣ​ಕ್ಕೆ ತೆಗೆದುಕೊಳ್ಳಲಾಗಿರುವ ಅಗತ್ಯ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಕ್ಷಿಪ್ತ ಮಾಹಿತಿ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಈವರೆಗೆ 282 ಜನರ ಗಂಟಲು ದ್ರವದ ಸ್ಯಾಂಪಲ್​ ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ ಸದ್ಯ 155 ವರದಿಗಳು ನೆಗೆಟಿವ್ ಬಂದಿವೆ. 7 ವರದಿಗಳು ಪಾಸಿಟಿವ್ ಬಂದಿವೆ. ಇನ್ನೂ 7ರಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ. 120 ಮಂದಿಯ ವರದಿ ಇನ್ನೂ ಬಾಕಿ ಇವೆ ಎಂದು ತಿಳಿಸಿದರು.

ಇನ್ನೂ 348 ಜನರ ಮೇಲೆ ನಿಗಾ ಇಡಲಾಗಿದ್ದು, ಪಾಸಿಟಿವ್ ಬಂದಿರುವ 7 ಜನರ ಪ್ರಾಥಮಿಕ ಸಂಪರ್ಕ ಸಂಬಂಧ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 7 ಜನರ ವರದಿ ಪಾಸಿಟಿವ್ ಬಂದ ನಂತರ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.

ಗ್ರಾಮ ಪಟ್ಟಣ, ನಗರಗಳಲ್ಲಿ ಯಾವುದೇ ಸಾವುಗಳು ಸಂಭವಿಸಿದರೆ ಮಾಹಿತಿ ನೀಡಲು ಸೂಚಿಸಲಾಗಿದೆ. ಯಾರೇ ಸಾವಿಗೀಡಾದರೂ ಅಂತ್ಯಕ್ರಿಯೆಯ ಮುಂಚೆ ಸಮಗ್ರ ವಿಚಾರಣೆ ನಡೆಸಲು ಆದೇಶಿಸಲಾಗಿದೆ ಎಂದರು.

ಕೊರೊನಾ ಪಾಸಿಟಿವ್ ವರದಿಗಳು ಬಂದ ಮೇಲೆ ರೈತರು ಎಪಿಎಂಸಿಗೆ ಬರುತ್ತಿಲ್ಲ. ಈ ಹಿನ್ನೆಲೆ ವಿಜಯಪುರ ನಗರದ 5 ಕಡೆ ತರಕಾರಿ, ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ವಿಜಯಪುರ ನಗರದ ಸಿಂದಗಿ ರಸ್ತೆಯ ಕಡೆ ಶಿವಗಿರಿ, ಸೋಲಾಪುರ ರಸ್ತೆಯ ಎಂ.ಬಿ.ಪಾಟೀಲ ನಗರದ ಬಳಿ, ಸೆಟಲೈಟ್ ಬಸ್ ನಿಲ್ದಾಣ, ಬಬಲೇಶ್ವರ ರಸ್ತೆಯ ನವಭಾಗ ಡಬಲ್ ರಸ್ತೆ, ಇಬ್ರಾಹಿಂಪುರ ರಿಂಗ್ ರೋಡ್​​ನ ಸೇಂಟ್ ಜೋಸೆಫ್​ ಗ್ರೌಂಡ್ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದರು.

7 ಪಾಸಿಟಿವ್ ರೋಗಿಗಳ ಚಿಕಿತ್ಸೆಯ ಮೇಲೆ ನಿಗಾ ಇಡಲಾಗಿದೆ. 50 ಸಿಸಿಟಿವಿ ಮೂಲಕ ಗಮನವಿಡಲಾಗಿದೆ. 5 ಆಸ್ಪತ್ರೆಗಳ ಒಟ್ಟು 70 ಜನ ವೈದ್ಯರು ಮತ್ತು ಇತರ ಸಿಬ್ಬಂದಿಯ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.