ETV Bharat / state

ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 6 ರಲ್ಲಿ ಕಾಂಗ್ರೆಸ್​​ ಗೆಲುವಿನ ಕೇಕೆ

ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವ ಮತ್ತು ಹಿನ್ನೆಡೆ ಸಾಧಿಸಿರುವ ಅಭ್ಯರ್ಥಿಗಳ ವಿವರ.

vijayapura-district-assembly-election-result
ವಿಜಯಪುರ ಜಿಲ್ಲೆಯಲ್ಲಿ 8ರಲ್ಲಿ 6 ಕ್ಷೇತ್ರದಲ್ಲಿ ಕಾಂಗ್ರೆಸ್​​ ಗೆಲುವಿನ ಕೇಕೆ
author img

By

Published : May 13, 2023, 10:56 PM IST

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೇ, ತಲಾ ಒಂದು ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಪಡೆದುಕೊಂಡಿವೆ. ಕಳೆದ ಚುನಾವಣೆಯಲ್ಲಿ 3 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಎರಡು ಕ್ಷೇತ್ರ ಕಳೆದುಕೊಂಡಿವೆ. ಜೆಡಿಎಸ್ 2 ಕ್ಷೇತ್ರದಲ್ಲಿ ಒಂದು ಕ್ಷೇತ್ರ ಕಳೆದುಕೊಂಡರೇ, ಕಾಂಗ್ರೆಸ್ 3 ರಿಂದ 6 ಸ್ಥಾನಕ್ಕೆ ಹೆಚ್ಚಿಸಿಕೊಂಡಿದೆ. ಬಹು ಚರ್ಚಿತ ಕ್ಷೇತ್ರವಾಗಿದ್ದ ವಿಜಯಪುರ ನಗರಕ್ಕೆ ಮತ್ತೆ ಬಸನಗೌಡ ಪಾಟೀಲ್​ ಯತ್ನಾಳ್​​ ಹಾಗೂ ಬಬಲೇಶ್ವರಕ್ಕೆ ಎಂ.ಬಿ ಪಾಟೀಲ್​​ ಮರು ಆಯ್ಕೆಯಾಗಿದ್ದಾರೆ.

ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಮರು ಆಯ್ಕೆಯಾಗಿದ್ದಾರೆ. ಮುದ್ದೇಬಿಹಾಳ, ಸಿಂದಗಿ, ದೇವರಹಿಪ್ಪರಗಿಯ ಬಿಜೆಪಿ ಅಭ್ಯರ್ಥಿಗಳು ಸೋತಿದ್ದರೆ, ಇಲ್ಲಿ ಎರಡು ಕ್ಷೇತ್ರ ಕಾಂಗ್ರೆಸ್ ಹಾಗೂ ದೇವರಹಿಪ್ಪರಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಗೆಲುವಿನ ಅಂತರ: ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ 94,201 ಮತಗಳಿಸಿದರೆ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹಮೀದ್ ಮುಷರೀಫ್​​ 85,978 ಮತಗಳಿಸಿ 8,223 ಮತಗಳ ಅಂತರದಿಂದ ಯತ್ನಾಳ್​ ಗೆದ್ದಿದ್ದಾರೆ. ಬಸವನಬಾಗೇವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್​ 68,126 ಮತ ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಕೆ. ಬೆಳ್ಳುಬ್ಬಿ 43,262 ಮತಗಳಿಸಿದ್ದಾರೆ. 24,864 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ.

ದೇವರಹಿಪ್ಪರಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ 65,952 ಮತ ಹಾಗೂ ಬಿಜೆಪಿಯ ಸೋಮನಗೌಡ ಪಾಟೀಲ ಸಾಸನೂರ 45,777 ಮತ ಗಳಿಸಿದರೆ 20,175 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದರು. ನಾಗಠಾಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ 78,990 ಮತ ಪಡೆದರೆ ಬಿಜೆಪಿಯ ಸಂಜು ಐಹೊಳ್ಳಿ 48,175 ಮತಗಳಿಸಿದರು. 30815 ಮತಗಳ ಅಂತರದಿಂದ ಕಾಂಗ್ರೆಸ್ ಜಯ ಸಾಧಿಸಿದೆ.

ಹೈ ವೋಲ್ಟೇಜ್​​ ಕ್ಷೇತ್ರವಾಗಿದ್ದ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ್​​ 93,923 ಮತ ಗಳಿಸಿದರೆ ಇವರ ಪ್ರತಿಸ್ಪರ್ಧಿ ವಿಜುಗೌಡ ಪಾಟೀಲ್​ 78,707 ಮತಗಳಿಸಿದರು. 15,216 ಅಂತರಗಳಿಂದ ಎಂ.ಬಿ. ಪಾಟೀಲ್​ ಜಯಗಳಿಸಿದರು. ಇಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ್​ 71,785 ಮತಗಳಿಸಿದರೆ ಜೆಡಿಎಸ್ ಬಿ.ಡಿ. ಪಾಟೀಲ್​​ 61,456 ಮತ ಗಳಿಸಿದರು. 10,329 ಮತಗಳ ಅಂತರದಿಂದ ಜಯ ಗಳಿಸಿದರು.

ಮುದ್ದೇಬಿಹಾಳ ಕ್ಷೇತ್ರದಲ್ಲಿ ಅಪ್ಪಾಜಿ ನಾಡಗೌಡ 79,483 ಮತ ಪಡೆದರೆ, ಬಿಜೆಪಿಯ ಎ.ಎಸ್. ಪಾಟೀಲ್​ ನಡಹಳ್ಳಿ 71,846 ಮತ ಪಡೆದುಕೊಂಡರು. ಇನ್ನು ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 87,621 ಮತಗಳಿಸಿದರೆ, ಬಿಜೆಪಿಯ ರಮೇಶ್​​ ಭೂಸನೂರ 79,813 ಪಡೆದು 7,808 ಮತಗಳ ಅಂತರದಿಂದ ಅಶೋಕ ಮನಗೂಳಿ ಗೆಲುವು ಸಾಧಿಸಿದ್ದಾರೆ.

ನೋಟಾ ಜಯಭೇರಿ: ವಿಜಯಪುರ ಜಿಲ್ಲೆಯ 8 ಮತಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನಿರಾಕರಿಸಿ ಮತ ಚಲಾವಣೆ ಮಾಡುವ 'ನೋಟಾ' ಸಾಕಷ್ಟು ಪ್ರಭಾವ ಬೀರಿದೆ. ಒಟ್ಟು 8 ಕ್ಷೇತ್ರದಲ್ಲಿ 7,237 ಮತಗಳು ನೋಟಾ ಮತಗಳಾಗಿವೆ. ಸಿಂದಗಿ ಕ್ಷೇತ್ರದಲ್ಲಿ 963, ಇಂಡಿ ಕ್ಷೇತ್ರದಲ್ಲಿ 886 ಮತ, ನಾಗಠಾಣ ಕ್ಷೇತ್ರದಲ್ಲಿ 1,016 ಮತಗಳು, ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 1,234 ಮತಗಳು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 695 ಮತಗಳು, ಬಬಲೇಶ್ವರ ಮತಕ್ಷೇತ್ರದಲ್ಲಿ 611, ವಿಜಯಪುರ ನಗರ ಮತಕ್ಷೇತ್ರದಲ್ಲಿ 994 ಮತ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 838 ನೋಟಾ ಮತಗಳು ಚಲಾವಣೆಗೊಂಡಿದೆ. ಈ ಮೂಲಕ ಪ್ರಜ್ಞಾವಂತ ಮತದಾರ ಯಾವ ಅಭ್ಯರ್ಥಿಗಳು ತಮಗೆ ಇಷ್ಟವಿಲ್ಲ ಎನ್ನುವ ಸಂದೇಶ ಸಾರಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಸೋಲು: 5 ಕ್ಷೇತ್ರದಲ್ಲಿ ಕಾಂಗ್ರೆಸ್ ಕೈ ಹಿಡಿದ ಮತದಾರರು​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.