ವಿಜಯಪುರ: ಸಿಡಿಲು ಬಡಿದು 15 ಮೇಕೆಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಡಿವಾಳಪ್ಪ ಹಿರೇಕುರುಬರ್ ಎಂಬುವರಿಗೆ ಸೇರಿದ ಮೇಕೆಗಳು ಸಾವಿಗೀಡಾಗಿವೆ. ಹೊಲದಲ್ಲಿ ಗಿಡದ ಕೆಳಗಡೆ ಮೇಯುತ್ತಿದ್ದಾಗ ಸಿಡಿಲು ಬಡಿದು 15 ಮೇಕೆ ಸಾವನ್ನಪ್ಪಿವೆ.
ಸುಮಾರು 2 ಲಕ್ಷ ಬೆಲೆಬಾಳುವ ಮೇಕೆಗಳಾಗಿವೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಕುರಿಗಾಯಿ ಮಡಿವಾಳಪ್ಪ ಒತ್ತಾಯಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.