ETV Bharat / state

ವಿಜಯಪುರ; ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಕುರಿತು ಮಾಹಿತಿ ನೀಡಿದ ಡಿಸಿ

ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ರೈತರೇ ಬೆಳೆ ವಿವರ ದಾಖಲಿಸುವುದರಿಂದ ಮುಂದೆ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಮತ್ತಿತರೆ ಯೋಜನೆಗಳ ಸವಲತ್ತು ಪಡೆಯುವಲ್ಲಿ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಪಿ. ತಿಳಿಸಿದರು.

DC gave details about crop survey mobile App

author img

By

Published : Aug 18, 2020, 8:07 PM IST

ವಿಜಯಪುರ: ತಾಲೂಕಿನ ಹಿಟ್ಟನಹಳ್ಳಿ ಗ್ರಾಮದ ರೈತ ರಮೇಶ್ ಮಂಜಪ್ಪ ಕುಬರಡ್ಡಿ ಅವರ ಹೊಲದಲ್ಲಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಕುರಿತು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಪಿ. ರೈತರಿಗೆ ಮಾಹಿತಿ ನೀಡಿದರು.

ತಮ್ಮ ಜಮೀನಿನಲ್ಲಿ ಬಿತ್ತಿದ ಎಲ್ಲಾ ಬೆಳೆಗಳನ್ನು ಛಾಯಾಚಿತ್ರ ಸಹಿತ ಸ್ವತಃ ರೈತರೇ ಮಾಹಿತಿಯನ್ನು ದಾಖಲಿಸಲು ಕರೆ ನೀಡಿದರು. ರೈತರೇ ಬೆಳೆ ವಿವರ ದಾಖಲಿಸುವುದರಿಂದ ಮುಂದೆ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಮತ್ತಿತರೆ ಯೋಜನೆಗಳ ಸವಲತ್ತು ಪಡೆಯುವಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ತಮ್ಮಲ್ಲಿ ಸ್ಮಾರ್ಟ್ ಫೋನ್ ಇಲ್ಲದಿದ್ದಲ್ಲಿ ಅಥವಾ ಅಪ್ಲಿಕೇಶನ್ ಬಳಕೆ ಗೊತ್ತಿಲ್ಲದೇ ಇದ್ದಲ್ಲಿ ಗ್ರಾಮದ ಯುವಕರ ಅಥವಾ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಲು ಸಲಹೆ ನೀಡಿದರು.

ಜಂಟಿ ಕೃಷಿ ನಿರ್ದೇಶಕರಾದ ಡಾ. ರಾಜಶೇಖರ್ ವಿಲಿಯಮ್ಸ್, ಉಪ ಕೃಷಿ ನಿರ್ದೇಶಕರಾದ ಪ್ರಕಾಶ್ ಆರ್. ಚವ್ಹಾಣ್ ಮತ್ತು ರಾಘವೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಎಸ್. ಬಿ. ದೊಡ್ಡಮನಿ ಹಾಗು ರೈತರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.