ETV Bharat / state

ಇಂಜಿನಿಯರಿಂಗ್ ರಾಷ್ಟ್ರೀಯ ರ‍್ಯಾಂಕಿಂಗ್​​​​​ನಲ್ಲಿ ಬಿಎಲ್​​ಡಿಇ ಸಂಸ್ಥೆಗೆ 53ನೇ ಸ್ಥಾನ

ವಿಜಯಪುರ ಬಿಎಲ್​​ಡಿಇ ಸಂಸ್ಥೆ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು ರಾಷ್ಟ್ರೀಯ ರ‍್ಯಾಂಕಿಂಗ್​​​​​​​​​​​​​​​ ನಲ್ಲಿ 53 ನೇ ಸ್ಥಾನ ಪಡೆದುಕೊಂಡಿದೆ.

Vijayapura BLDE institute
Vijayapura BLDE institute
author img

By

Published : Aug 1, 2020, 12:01 PM IST

ವಿಜಯಪುರ: 2020ನೇ ಸಾಲಿನಲ್ಲಿ ಟೈಮ್ಸ್ ಇಂಜಿನಿಯರಿಂಗ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ವಿಜಯಪುರ ಬಿಎಲ್ ಡಿಇ ಸಂಸ್ಥೆ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು ರಾಷ್ಟ್ರೀಯ ರ‍್ಯಾಂಕಿಂಗ್​​​​​​​​​ ನಲ್ಲಿ 53 ನೇ ಸ್ಥಾನ ಪಡೆದುಕೊಂಡಿದೆ ಎಂದು ಪ್ರಾಚಾರ್ಯ ಡಾ.ಅತುಲ್ ಆಯರೆ ತಿಳಿಸಿದ್ದಾರೆ.

ಈ ಕುರಿತ ಪ್ರಕಟಣೆಯಲ್ಲಿ ದೇಶದಲ್ಲಿ ಪ್ರಖ್ಯಾತ ಟೈಮ್ಸ್ ಸಂಸ್ಥೆಯ ಅಂಗ ಸಂಸ್ಥೆ ಟೈಮ್ಸ್ ಇಂಜಿನಿಯರಿಂಗ್ ವಿವಿಧ ಕಾಲೇಜುಗಳ ಮೂಲ ಸೌಕರ್ಯಗಳು, ತಂತ್ರಜ್ಞಾನದ ಅನುಭವ, ಸಂಶೋಧನಾ ಯೋಜನೆಗಳು, ಬೋಧನಾ ಸಲಕರಣೆಗಳಗಳನ್ನು ಗಣನೆಗೆ ತೆಗೆದು ಕೊಂಡಿದೆ.

ವಿಶೇಷವಾಗಿ ಪದವಿ ವಿದ್ಯಾರ್ಥಿಗಳ ಸಂಶೋಧನೆಯನ್ನು ಈ ರ‍್ಯಾಂಕಿಂಗ್​​​ನಲ್ಲಿ ಗಮನಿಸಲಾಗಿದೆ. ಅಲ್ಲದೇ ವಿಜಯಪುರದಂತಹ ಗ್ರಾಮೀಣ ಪ್ರದೇಶದಲ್ಲಿನ ಈ ಕಾಲೇಜಿನಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಜಗತ್ತಿನ ಪ್ರಸಿದ್ಧ 500 ಕಂಪನಿಗಳ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಈ ರ‍್ಯಾಂಕಿಂಗ್​​​​ ದೊರೆಯಲು ಕಾರಣವಾಗಿದೆ. ಇದು ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.

1985ರಲ್ಲಿ ಆರಂಭಗೊಂಡು ಕಳೆದ 35 ವರ್ಷಗಳಿಂದ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವತ್ತ ಸತತ ಪರಿಶ್ರಮ ವಹಿಸಿದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಕಾರ್ಯವನ್ನು ಶ್ಲಾಘನೀಯ ಕಾರ್ಯ ಎಂದು ತಿಳಿಸಿದ್ದಾರೆ.

ಬಿಎಲ್​​​​ಡಿಇ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ ಹಾಗೂ ಆಡಳಿತ ಮಂಡಳಿಯವರು ಕಾಲೇಜು ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.