ETV Bharat / state

ವಿಜಯಪುರ ಸೈನಿಕ ಶಾಲೆಯ 56ನೇ ವಾರ್ಷಿಕ ಕ್ರೀಡಾಕೂಟ ಸಮಾರೋಪ - vijayapura news

ನಗರದ ಸೈನಿಕ‌ ಶಾಲೆಯ ಕ್ರೀಡಾಂಗಣದಲ್ಲಿ 56ನೇ ವಾರ್ಷಿಕ ಕ್ರೀಡಾಕೂಟ ನಡೆಯಿತು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.

ವಿಜಯಪುರ ಸೈನಿಕ ಶಾಲೆಯ 56ನೇ ವಾರ್ಷಿಕ ಕ್ರೀಡಾಕೂಟ ಸಮಾರೋಪ
author img

By

Published : Oct 6, 2019, 4:02 AM IST

ವಿಜಯಪುರ: 21ನೇ ಶತಮಾನ‌ ಭಾರತೀಯರ ಶತಮಾನವಾಗಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿಜಯಪುರ ಸೈನಿಕ ಶಾಲೆಯ 56ನೇ ವಾರ್ಷಿಕ ಕ್ರೀಡಾಕೂಟ ಸಮಾರೋಪ

ನಗರದ ಸೈನಿಕ ಶಾಲೆಯ 56ನೇ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂದಿನ‌ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ ಹಾಗೂ ಬಿ.ಡಿ. ಜತ್ತಿಯವರ ಶ್ರಮ ಮತ್ತು ಮಾಜಿ‌ ಶಿಕ್ಷಣ ಮಂತ್ರಿ ಎಸ್. ಆರ್. ಕಂಠಿಯವರ ಪ್ರಯತ್ನದಿಂದ ವಿಜಯಪುರದಲ್ಲಿ ಸೈನಿಕ‌ ಶಾಲೆ ಪ್ರಾರಂಭವಾಯಿತು. ಈ ಶಾಲೆಯಲ್ಲಿ ಓದಿದ 600ಕ್ಕೂ ಹೆಚ್ಚು ಮಕ್ಕಳು ವಾಯುಸೇನೆ, ನೌಕಾದಳ ಹಾಗೂ ಭೂ ಸೇನೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮುಧೋಳದ ರಮೇಶ ಹಲಗಲಿ ಭಾರತೀಯ ಸೇನೆಯ ಡೆಪ್ಯೂಟಿ ಚೀಫ್ ಆಗಿ ನಿವೃತ್ತಿ ಹೊಂದಿದ್ದಾರೆ. ಅವರು ವಿಜಯಪುರ ಸೈನಿಕ‌ ಶಾಲೆಯಲ್ಲಿ ಬೆಳೆದವರು ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ ಎಂದರು.

ಕಳೆದ ಐದೂವರೆ ವರ್ಷದಲ್ಲಿ 190 ದೇಶಗಳಲ್ಲಿ ಪ್ರಧಾನಿ‌ ನರೇಂದ್ರ ಮೋದಿಯವರು ಭಾರತದ ಕೀರ್ತಿ, ಗೌರವ ಹೆಚ್ಚಿಸಿದ್ದಾರೆ. ಇವರೊಂದಿಗೆ ನಾಡಿನ‌ ಜನತೆ ಕೈ ಜೋಡಿಸಿದ್ದರಿಂದ ಯುವ ದೇಶ ಭಾರತ ಎಂಬ ಕೀರ್ತಿ ಗೌರವ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಯಿಂದ 2.45 ಕೋಟಿ ವೆಚ್ಚದಲ್ಲಿ ಶಾಲೆಯ ಹೊರ ಕ್ರೀಡಾಂಗಣ ಹಾಗೂ ಸುಮಾರು 2 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಹಣ ಮಂಜೂರು ಮಾಡಲಾಗಿದೆ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮೊದಲು ಸೈನಿಕ‌ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಪ್ರಾಚಾರ್ಯರು ಹಾಗೂ ಭಾರತೀಯ ನೌಕಾದಳದ ಕ್ಯಾಪ್ಟನ್ ವಿನಯ ತಿವಾರಿ ಮತ್ತು ಉಪ ಪ್ರಾಚಾರ್ಯ ನೌಕಾದಳದ ಕಮಾಂಡರ್ ರವಿಕಾಂತ ಶುಕ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Intro:ವಿಜಯಪುರ: 21ನೇ ಶತಮಾನ‌ ಭಾರತೀಯರ ಶತಮಾನವಾಗಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡಿದರು

ನಗರದ ಸೈನಿಕ‌ ಶಾಲೆಯ ಹೂರ ಕ್ರೀಡಾಂಗಣದಲ್ಲಿ 56ನೇ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿ ತಂಡಗಳಿಗೆ ಪಾರಿಷೋತಕ ವಿತರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಂದಿನ‌ ಮುಖ್ಯಂತ್ರಿಗಳಾದ ಎಸ್ ನಿಜಲಿಂಗಪ್ಪ ಹಾಗೂ ಬಿ ಡಿ ಜತ್ತಿಯವರ ಶ್ರಮ ಮತ್ತು ಮಾಜಿ‌ ಶಿಕ್ಷಣ ಮಂತ್ರಿ ಎಸ್ ಆರ್ ಕಂಠಿಯವರ ಪ್ರಯತ್ನದಿಂದ ವಿಜಯಪುರದಲ್ಲಿ ಸೈನಿಕ‌ ಶಾಲೆ ಪ್ರಾರಂಭವಾಯಿತು. ಈ ಶಾಲೆಯಲ್ಲಿ ಓದಿದ 600ಕ್ಕೂ ಹೆಚ್ಚು ಮಕ್ಕಳು ವಾಯುಸೇನಾ, ನೌಕಾದಳ ಹಾಗೂ ಭೂ ಸೇನಾ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮುಧೋಳದ ರಮೇಶ ಹಲಗಲಿ ಭಾರತೀಯ ಸೇನೆಯ ಡೆಪ್ಯೂಟಿ ಚೀಫ್ ಆಗಿ ನಿವೃತ್ತಿ ಹೊಂದಿದ್ದಾರೆ ಅವರು ವಿಜಯಪುರ ಸೈನಿಕ‌ ಶಾಲೆಯಲ್ಲಿ ಬೆಳೆದವರು ಎಂದು ಹೇಳಲು ಹೆಮ್ಮೆಯ ಸಂಗತಿ.

Body:ಈ ಸೈನಿಕ ಶಾಲೆಯಲ್ಲಿ ಓದಿದ ಮಕ್ಕಳು ಯಾರೂ ಕೆಲಸವಿಲ್ಲದೆ ನಿರುದ್ಯೋಗಿಯಾಗಿಲ್ಲ ಒಂದಲ್ಲಾ ಒಂದು ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕರು ವೈದ್ಯಕೀಯ, ಇಂಜಿನಿಯರ್, ಐಎಎಸ್, ಐಪಿಎಸ್‌‌ನಂತಹ ಕಳೆದ 53 ವರ್ಷಗಳಿಂದ ಓದಿ‌ ಪ್ರಗತಿ ಕಂಡಿದ್ದಾರೆ. ಸೈನಿಕ ಶಾಲೆಯಲ್ಲಿ ಓದುವ ಮಕ್ಕಳು ದೇಶ ಸಂಸ್ಕ್ರತಿ, ದೇಶ ಪ್ರೇಮ‌, ಮತ್ತು ಸಾಹಿತ್ಯಾಸಕ್ತಿ ಹೊಂದಿರುತ್ತಾರೆ. ಕಳೆದ ಐದುವರೇ ವರ್ಷದಲ್ಲಿ 190 ದೇಶಗಳಲ್ಲಿ ಪ್ರಧಾನಿ‌ ನರೇಂದ್ರ ಮೋದಿಯವರು ಭಾರತದ ಕೀರ್ತಿ,ಗೌರವ ಹೆಚ್ಚಿಸಿದ್ದಾರೆ. ನಾಡಿನ‌ ಜನತೆ ಕೈ ಜೋಡಿಸಿದ್ದರಿಂದ ಯುವ ದೇಶ ಭಾರತ ಎಂಬ ಕೀರ್ತಿ ಗೌರವ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು

ನನ್ನ ಹತ್ತಿರ ಪ್ರಮುಖವಾಗಿ ಲೋಕೋಪಯೋಗಿ ಮತ್ತು ಸಮಾಜಕಲ್ಯಾಣ ಇಲಾಖೆ ಖಾತೆಗಳಿವೆ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆಯಿಂದ 2.45 ಕೋಟಿ ವೆಚ್ಚದಲ್ಲಿ ಶಾಲೆಯ ಹೊರ ಕ್ರೀಡಾಂಗಣ ಸುಮಾರು 2 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಮಂಜೂರ ಮಾಡಲಾಗಿದೆ. ಹಣವನ್ನು ಶಾಲಾ ಆಡಳಿತ ಮಂಡಳಿ ಆ ಕೆಲಸ ಕಾರ್ಯಗಳನ್ನು ಮಾಡಲಿ ವಿಜಯಪುರ ಸೈನಿಕ ಶಾಲೆಯ ಮಕ್ಕಳು ಕೀರ್ತಿವಂತರಾಗಿ,ಗೌರವದಿಂದ ದೇಶದ ಹೆಮ್ಮೆಯ ಪ್ರಜೆಗಳಾಗಲಿ‌ ಎಂದು ಆಶಿಸಿದರು.

Conclusion:ಕಾರ್ಯಕ್ರಮ ಆರಂಭಕ್ಕಿಂತ ಮೊದಲು ಸೈನಿಕ‌ ಶಾಲೆಯ ವಿದ್ಯಾರ್ಥಿಗಳು ತಾಳದೊಂದಿಗೆ ಪಂಥ ಸಂಚಲನ ನಡೆಸಿದರು. ಪ್ರಾಚಾರ್ಯರ ಹಾಗೂ ಭಾರತೀಯ ನೌಕಾದಳದ ಕ್ಯಾಪ್ಟನ್ ವಿನಯ ತಿವಾರಿ ಮತ್ತು ಉಪ ಪ್ರಾಚಾರ್ಯ ನೌಕಾದಳದ ಕಮಾಂಡರ್ ರವಿಕಾಂತ ಶುಕ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿವಾನಂದ ಮದಿಹಳ್ಳಿ
ವಿಜಯಪುರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.