ವಿಜಯಪುರ : ಲಾಕ್ಡೌನ್ನಿಂದ ಹೂವು ಮಾರಾಟಗಾರರ ಅಂಗಡಿಗಳು ಬಂದ್ ಆಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, ಕಳೆದ ನಾಲ್ಕು ದಿನಗಳಿಂದ ಆರಂಭವಾದ ಹೂವು ಮಾರಾಟಕ್ಕೆ ಗ್ರಾಹರಿಕರಿಲ್ಲದೆ ಪರದಾಡುವಂತಾಗಿದೆ.
ಲಾಕ್ಡೌನ್ ಹೇರಿಕೆಯಿಂದ ವ್ಯಾಪಾರವಿಲ್ಲದೆ ಹೂವು ಮಾರಾಟಗಾರು ಆರ್ಥಿಕ ಸಂಕಷ್ಟದಲ್ಲಿದ್ದರು. ಕಳೆದವಾರದಿಂದ ಹೂವು ಮಾರಾಟ ಮರಳಿ ಆರಂಭಿಸಿದ್ದರೂ ಕೂಡ ಖರೀದಿಸಲು ಯಾವುದೇ ಗಿರಾಕಿಗಳು ಬಾರದೆಹೂವಿನ ಅಂಗಡಿಯ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಕೊರೊನಾ ಭೀತಿಯಿಂದ ಎಲ್ಲಾ ದೇವಾಲಯ, ಸಭೆ, ಸಮಾರಂಭಗಳಿಗೆ ಸರ್ಕಾರ ನಿಷೇಧ ಹೇರಿದ ಪರಿಣಾಮ ಹೂವು ಮಾರಾಟಗಾರ ಬದುಕು ಅತಂತ್ರವಾಗಿದೆ.
ಇತ್ತ ಎಲ್ಲ ಸಾರಿಗೆ ಸಂಪರ್ಕಗಳು ಬಂದ್ ಆಗಿರುವ ಕಾರಣ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿದ್ದ ತರಹೇವಾರಿ ಹೂವುಗಳ ಬರುತ್ತಿಲ್ಲ. ಜಿಲ್ಲೆಯಲ್ಲಿ ಲಭ್ಯವಿರುವ ಹೂವುಗಳನ್ನ ತಂದು ಮಾರಾಟಗಾರರು ಅಂಗಡಿ ಆರಂಭಿಸಿದ್ದರು. ಖರೀದಿದಾರರು ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲಕುವಂತಾಗಿದೆ ಎಂದು ಕಳವಳಕ್ಕೀಡಾಗಿದ್ದಾರೆ.