ವಿಜಯಪುರ: ಜಿಲ್ಲೆಯಲ್ಲಿ ಇಂದು ಆರು ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು, ಇಂದು ರೋಗಿ ಸಂಖ್ಯೆ: 1728 (29 ವರ್ಷದ ಮಹಿಳೆ), 1729 (20 ವರ್ಷದ ಪುರುಷ), 411 (30 ವರ್ಷದ ಮಹಿಳೆ), 1091 (04 ವರ್ಷದ ಹೆಣ್ಣು ಮಗು), 1494 (30 ವರ್ಷದ ಪುರುಷ), 1122 (35 ವರ್ಷದ ಮಹಿಳೆ) ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 27,383 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 81 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 5,820 ಜನರು 28 ದಿನಗಳ ಐಸೋಲೇಷನ್ಅವಧಿ ಪೂರ್ಣಗೊಳಿಸಿದ್ದಾರೆ. 21,510 ಜನರು (1 ರಿಂದ 28 ದಿನಗಳ) ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 54 ಜನರು ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 22 ಜನರು ಆಸ್ಪತ್ರೆಯಲ್ಲಿರುವ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 22,065 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 10,876 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 11,108 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ರೂಢಗಿಯಲ್ಲಿ ಸೇವಾ ಸದನದಿಂದ ದಿನಸಿ ಕಿಟ್:
ಮುದ್ದೇಬಿಹಾಳ ತಾಲೂಕಿನ ರೂಢಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಕ್ವಾರಂಟೈನ್‌ಲ್ಲಿದ್ದ ಕಾರ್ಮಿಕರಿಗೆ ಸೇವಾ ಸದನ ಸಂಸ್ಥೆಯಿoದ ದಿನಸಿ ಕಿಟ್ ವಿತರಿಸಲಾಯಿತು. ರೂಢಗಿ ಗ್ರಾಪಂ ಪಿಡಿಒ ಎನ್.ಎಂ.ಬಿಸ್ಟಗೊಂಡ, ಸೇವಾ ಸದನ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಬೀನಾ ,ಗ್ರಾಪಂ ಕಾರ್ಯದರ್ಶಿ ಸಿದ್ದು ದ್ಯಾಮಗೊಂಡ, ಸದಸ್ಯರಾದ ಕೋರಿ, ಸಂಯೋಜಕಿ ಸಿಸ್ಟರ್ ರಿ ಲೀನಾ, ಕಾರ್ಯಕರ್ತೆಯರಾದ ಅನ್ನಕ್ಕ, ಸಿಬ್ಬಂದಿ ಇದ್ದರು. ಇದೇ ವೇಳೆ, ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ವಲಸಿಗರಿಗೆ 14 ದಿನಗಳ ಕಾಲ ಮತ್ತೆ ಹೋಂ ಕ್ವಾರಂಟೈನ್‌ನಲ್ಲಿರಲು ತಿಳಿಸಲಾಯಿತು.