ವಿಜಯಪುರ: ಬಹಿರ್ದೆಸೆಗೆ ತೆರಳುವಾಗ ಲಾರಿಯಡಿ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ನಡೆದಿದೆ.
ಅನುಸೂಯಾ ಹಜೇರಿ (65) ಮೃತೆ. ಬಹಿರ್ದೆಸೆಗೆಗಾಗಿ ರಸ್ತೆ ದಾಟುವಾಗ ಲಾರಿ ಹಾಯ್ದು ಈ ಅಪಘಾತ ಸಂಭವಿಸಿದೆ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.