ETV Bharat / state

ವಿಜಯಪುರ ಪೊಲೀಸ್​ ವಾರ್ಷಿಕ ಕ್ರೀಡಾಕೂಟ ಸಂಪನ್ನ - ವಿಜಯಪುರದ ಪೋಲಿಸ್ ಕವಾಯತು ಮೈದಾನ

ವಿಜಯಪುರದ ಪೊಲೀಸ್ ಕವಾಯತು ಮೈದಾನದಲ್ಲಿ ಕಬಡ್ಡಿ, ವಾಲಿಬಾಲ್, ಓಟ, ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು.

vijayapura
ವಿಜಯಪುರದ ಪೋಲಿಸ್ ಕವಾಯತು ಮೈದಾನದಲ್ಲಿ ಪೊಲೀಸ್​ ವಾರ್ಷಿಕ ಕ್ರೀಡಾಕೂಟ ನಡೆಯಿತು.
author img

By

Published : Dec 14, 2019, 8:47 AM IST

ವಿಜಯಪುರ: ಎರಡು ದಿನ ನಡೆದ 2019ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟ ತೆರೆ ಕಂಡಿತು.

ನಗರದ ಪೋಲಿಸ್ ಕವಾಯತು ಮೈದಾನದಲ್ಲಿ ಕಬಡ್ಡಿ, ವಾಲಿಬಾಲ್, ಓಟ, ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು. ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ಹೆಚ್.ಜಿ.ರಾಘವೇಂದ್ರ ಸುಹಾಸ್ ಹಾಗೂ ವಿಜಯಪುರ ಸೈನಿಕ ಸ್ಕೂಲ್‌ನ ಉಪ ಪ್ರಾಚಾರ್ಯ ರವಿಕಾಂತ ಶುಕ್ಲಾ ಅತಿಥಿಗಳಾಗಿ ಆಗಮಿಸಿದ್ದರು.

ವಿಜಯಪುರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್​ ವಾರ್ಷಿಕ ಕ್ರೀಡಾಕೂಟ

ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಚೇತರಾದ ಪೋಲಿಸ್ ಸಿಬ್ಬಂದಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಪೋಲಿಸ್ ಸಿಬ್ಬಂದಿಯ 100 ಮೀಟರ್ ಓಟಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ಹೆಚ್.ಜಿ.ರಾಘವೇಂದ್ರ ಸುಹಸ್ ಗಾಳಿಯಲ್ಲಿ ಗುಂಡು ಹಾರಿಸುವುದರ ಮೂಲಕ‌ ಚಾಲನೆ ನೀಡಿದರು.

ಪೊಲೀಸ್ ತಂಡ ಹಾಗೂ ಮಾಧ್ಯಮ ತಂಡ ನಡುವಿನ‌ ಕ್ರಿಕೆಟ್‌ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪೊಲೀಸ್ ತಂಡ ಪಡೆದರೆ, ದ್ವಿತೀಯ ಸ್ಥಾನವನ್ನು ಮಾಧ್ಯಮ ವರದಿಗಾರರ ತಂಡ ಪಡೆದುಕೊಂಡಿತು. ಕ್ರೀಡಾಕೂಟದ ಸಮಗ್ರ ವೀರಾಗ್ರಹಣ ಕ್ರೀಡಾಪಟು ಪ್ರಶಸ್ತಿಯನ್ನು 15 ಅಂಕಗಳನ್ನು ಗಳಿಸುವುದರ ಮೂಲಕ‌ ಡಿಎಆರ್ ಪೊಲೀಸ್ ತಂಡದ ಉಮರ್ ಖಾತೇದಾರ ಹಾಗೂ ಮೆಹಬೂಬ್ ಮುಲ್ಲಾ ಪಡೆದರು.

ಮಹಿಳಾ ವಿಭಾಗದಲ್ಲಿ ಕ್ರೀಡಾಕೂಟದ ಸಮಗ್ರ ವೀರಾಗ್ರಹಣ ಪ್ರಶಸ್ತಿಯನ್ನು 12 ಅಂಕಗಳನ್ನು ಗಳಿಸುವುದರ ಮೂಲಕ ಸಿಇಎನ್ ಠಾಣೆಯ ಶ್ರೀಮತಿ ಎ.ಹೆಚ್ ಪಾಟೀಲ್ ಪಡೆದುಕೊಂಡರು. ಕ್ರೀಡಾಕೂಟದ ಟೀಮ್ ಚಾಂಪಿಯನ್‌ಶಿಪ್ ಪಟ್ಟವನ್ನು 24 ಅಂಕಗಳನ್ನು ಪಡೆಯುದರ ಮೂಲಕ ಡಿಎಅರ್ ಪೊಲೀಸ್ ಘಟಕ ವಿಜಯಪುರ ಪಡೆದುಕೊಂಡಿತು. 2019ನೇ ಸಾಲಿನ‌ ಪೊಲೀಸ್ ಕ್ರೀಡಾಕೂಟದ ಒಟ್ಟಾರೆ ಚಾಂಪಿಯನ್​ಶಿಪ್‌ 111 ಅಂಕ ಗಳಿಂದ ಡಿಎಆರ್ ಘಟಕ ವಿಜಯಪುರ ಪಡೆದು ವಿಜಯಶಾಲಿ ಎನಿಸಿಕೊಂಡಿತು.

Intro:ವಿಜಯಪುರ : ಕಳೆದ ಎರಡು ದಿನಗಳಿಂದ ನಡೆದ 2019 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಅಂತಿಮವಾಗಿ ಇಂದು ತೆರೆ ಕಂಡಿತು.

Body:ಮೂರು ದಿನಗಳ‌‌ ಕಾಲ ನಗರದ ಪೋಲಿಸ್ ಕವಾಯತ ಮೈದಾನದಲ್ಲಿ ಕಬಡ್ಡಿ, ವಾಲಿಬಾಲ್, ಕ್ರೀಡ್,ಓಟ,ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು. ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಬೆಳಗಾವಿ ಉತ್ತರ ವಲಯ ಐಜಿ ಎಚ್ ಜಿ ರಾಘವೇಂದ್ರ ಸುಹಾಸ್,ಹಾಗೂ ವಿಜಯಪುರ ಸೈನಿಕ ಸ್ಕೂಲ್‌ನ ಉಪ ಪ್ರಾಚಾರ್ಯ ರವಿಕಾಂತ ಶುಕ್ಲಾ ಅತಿಥಿಗಳಾಗಿ ಆಗಮಿಸಿದರು.
ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಚೇತ ಪೋಲಿಸ್ ಸಿಬ್ಬಂದಿಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು.
ಇನ್ನೂ ಪೋಲಿಸ್ ಸಿಬ್ಬಂದಿಗಳ ೧೦೦ ಮೀಟರ್ ಓಟಕ್ಕೆ ಬೆಳಗಾವಿ ಉತ್ತರ ವಲಯ ಐಜಿಪಿ ಎಚ್ ಜಿ ರಾಘವೇಂದ್ರ ಸುಹಸ್ ಗಾಳಿಯಲ್ಲಿ ಗುಂಡು ಹಾರಿಸುವುದರ ಮೂಲಕ‌ ಓಟಕ್ಕೆ ಚಾಲನೆ ನೀಡಿದರು.

Conclusion:ಪೋಲಿಸ್ ತಂಡ ಹಾಗೂ ಮಾಧ್ಯಮ ತಂಡ ನಡುವಿನ‌ ಕ್ರಿಕೆಟ್‌ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪೋಲಿಸ್ ತಂಡ ಪಡೆದರೆ ಹಾಗೂ ದ್ವಿತೀಯ ಸ್ಥಾನವನ್ನು ಮಾಧ್ಯಮ ವರದಿಗಾರ ತಂಡ ಪಡೆದುಕೊಂಡಿತು.
ಕ್ರೀಡಾಕೂಟದ ಸಮಗ್ರ ವೀರಾಗ್ರಹಣ ಕ್ರೀಡಾಪಟು ಪ್ರಶಸ್ತಿಯನ್ನು 15 ಅಂಕಗಳನ್ನು ಗಳಿಸುವುದ ಮೂಲಕ‌ ಇಬ್ಬರು ಡಿಎಆರ್ ಪೋಲಿಸ್ ತಂಡದ ಉಮರ್ ಖಾತೇದಾರ ಹಾಗೂ ಮೆಹಬೂಬ್ ಮುಲ್ಲಾ ಪಡೆದರು.
ಮಹಿಳಾ ವಿಭಾಗದಲ್ಲಿ ಕ್ರೀಡಾಕೂಟದ ಸಮಗ್ರ ವೀರಾಗ್ರಹಣ ಪ್ರಶಸ್ತಿಯನ್ನು 12 ಅಂಕಗಳನ್ನು ಗಳಿಸುವುದರ ಮೂಲಕ ಸಿಇಎನ್ ಠಾಣೆಯ ಶ್ರೀ ಮತಿ ಎ ಎಚ್ ಪಾಟೀಲ್ ಪಡೆದುಕೊಂಡರು. ಕ್ರೀಡಾಕೂಟದ ಟೀಮ್ ಚಾಂಪಿಯನ್‌ಶಿಪ್ ಪಟ್ಟವನ್ನು 24 ಅಂಕಗಳನ್ನು ಪಡೆಯುದರ ಮೂಲಕ ಡಿಎಅರ್ ಪೋಲಿಸ್ ಘಟಕ ವಿಜಯಪುರ ಪಡೆದುಕೊಂಡಿತು.2019 ನೇ ಸಾಲಿನ‌ ಪೋಲಿಸ್ ಕ್ರೀಡಾಕೂಟದ ಓವರಾಲ್ ಟೀಮ್ ಚೆಂಪಿಯಂಶಿಪ್‌ 111 ಅಂಕಗಳಿಂದ ಡಿಎಆರ್ ಘಟಕ ವಿಜಯಪುರ ಪಡೆದು ವಿಜಯಶಾಲಿಗಳಾದರು..

ಶಿವಾನಂದ ಮದಿಹಳ್ಳಿ
ವಿಜಯಪುರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.