ETV Bharat / state

ವಿಜಯಪುರ ನೂತನ ಪಾಲಿಕೆ ಸದಸ್ಯರು ಅತಂತ್ರ; ಬಜೆಟ್ ಮಂಡಿಸಿದ ಡಿಸಿ ವಿಜಯ ಮಹಾಂತೇಶ ದಾನ್ನಮ್ಮನವರ

ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿದ್ದರೂ ಅಲ್ಲಿಯ ಪರಿಸ್ಥಿತಿ ಹಿಂದಿನಂತೆ ಇದೆ - ಅಧಿಕಾರವಹಿಸಿಕೊಳ್ಳುವಲ್ಲಿ ವಿಫಲರಾದ ನೂತನ ಸದಸದ್ಯರು - ಕೊನೆಗೆ ಬಜೆಟ್​ ಮಂಡಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ.

District Collector Vijaya Mahantesh Dhannam
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ
author img

By

Published : Feb 10, 2023, 11:59 AM IST

Updated : Feb 10, 2023, 1:27 PM IST

ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ

ವಿಜಯಪುರ: ನ್ಯಾಯಾಲಯದ‌ ಮೆಟ್ಟಿಲೇರಿ ಸುಮಾರು ಮೂರು ವರ್ಷಗಳ ಕಾಲ ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೇ ಅಭಿವೃದ್ಧಿ ಕುಂಠಿತವಾಗಿದ್ದ 35 ವಾರ್ಡ್​ಗಳಲ್ಲಿ ಈಗ ಚುನಾವಣೆ ಮುಗಿದರೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮೇಯರ್ ಉಪ ಮೇಯರ್ ಚುನಾವಣೆ ನಡೆಸಲು ಜನಪ್ರತಿನಿಧಿಗಳು ತೋರುತ್ತಿರುವ ನಿರಾಸಕ್ತಿಯಿಂದ 35 ವಾರ್ಡ್​ಗಳ ನೂತನ ಸದಸ್ಯರು ಅಧಿಕಾರವೇ ವಹಿಸಿಕೊಂಡಿಲ್ಲ. ಇದರ ಪರಿಣಾಮ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರ ಅವರೇ 10.97ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದ್ದಾರೆ.

ಮೇಯರ್ ಉಪ ಮೇಯರ್ ಸ್ಥಾನಕ್ಕೆ ಈಗಾಗಲೇ ಸರ್ಕಾರ ಮೀಸಲಾತಿ ಪ್ರಕಟಣೆ ಮಾಡಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪ ಮೇಯರ್ ಸ್ಥಾನಕ್ಕೆ ಎಸ್ಟಿ ಪುರುಷರಿಗೆ ಮೀಸಲಾಗಿದೆ. ಇಷ್ಟಾದರೂ ಎರಡು ಸ್ಥಾನಕ್ಕೆ ಚುನಾವಣೆ ಮಾತ್ರ ನಡೆದಿಲ್ಲ. ಸದ್ಯ ಜಿಲ್ಲಾಡಳಿತ ಮಹಾನಗರ ಪಾಲಿಕೆಯು ಅಧಿಕಾರ ವಹಿಸಿಕೊಂಡಿದೆ. ನಿಯಮಾವಳಿಯಂತೆ ಮುಂದಿನ ಆಯವ್ಯಯಕ್ಕಾಗಿ ಸದ್ಯ ಉಳಿತಾಯ ಬಜೆಟ್ ಮಂಡಿಸಿ ಅದಕ್ಕೆ ಜಿಲ್ಲಾಧಿಕಾರಿ ಅನುಮೂದನೆ ಸಹ ನೀಡಿದ್ದಾರೆ.

2019ರಲ್ಲಿ ಚುನಾವಣೆ ನಡೆಯಬೇಕಾಗಿತ್ತು: ನಿಯಮಾವಳಿಯಂತೆ ಹಿಂದಿನ ಪಾಲಿಕೆ ಸದಸ್ಯರ ಅವಧಿ 2019ರಲ್ಲಿ ಮುಗಿದಿತ್ತು. ಆವಾಗಲೇ ಚುನಾವಣೆ ನಡೆಯಬೇಕಾಗಿತ್ತು. ಆದರೆ ಕೆಲ ಸದಸ್ಯರು ಮೀಸಲಾತಿ ವಿಚಾರವಾಗಿ ಕಲಬುರ್ಗಿ ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ಚುನಾವಣೆ ಮೂರು ವರ್ಷದ ನಂತರ 2022ರ ಅಕ್ಟೋಬರ್​ನಲ್ಲಿ ನಡೆದು 35 ವಾರ್ಡ್​ಗಳಿಗೆ ನೂತನ‌ ಸದಸ್ಯರು ಆಯ್ಕೆಯಾಗಿದ್ದಾರೆ.

ಬಿಜೆಪಿಗೆ ಅಧಿಕಾರ: ಸದ್ಯ 35 ವಾರ್ಡ್​ಗಳಲ್ಲಿ ಬಿಜೆಪಿ 17, ಕಾಂಗ್ರೆಸ್​ 10, ಪಕ್ಷೇತರರು 5, ಜೆಡಿಎಸ್ 1, ಹಾಗೂ ಎಐಎಂಐಎಂ 2 ಸ್ಥಾನಗಳಿಸಿದ್ದು ಸದ್ಯ ಪಕ್ಷೇತರ ಓರ್ವ ಪಕ್ಷೇತರ ಸದಸ್ಯ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇದರ ಜೊತೆಗೆ ನಗರ ಶಾಸಕ ಹಾಗೂ ಸಂಸದ ಬಿಜೆಪಿಯವರೇ ಇದ್ದಾರೆ. ಇವರ ಮತ ಸೇರಿ ಈ ಬಾರಿ ಪಾಲಿಕೆ ಅಧಿಕಾರದ ಗದ್ದುಗೆ ಹಿಡಿದಿದೆ.

ಇಕ್ಕಟ್ಟಿಗೆ ಸಿಲುಕಿದ ಸದಸ್ಯರು: ಮೇಯರ್ ಉಪ ಮೇಯರ್ ಆಯ್ಕೆ ಆಗುವವರೆಗೆ ನೂತನ ಸದಸ್ಯರು ಅಧಿಕಾರದ ಭಾಗ್ಯ ಅನುಭವಿಸುವ ಹಾಗಿಲ್ಲ. ಇದು ನೂತನ ಸದಸ್ಯರು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ನಗರದ ಪ್ರತಿ ವಾರ್ಡ್​ಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆ ಇರುವ ಕಾರಣ ಮತದಾರರು ನೂತನ ಸದಸ್ಯರು ಕಾಮಗಾರಿ ನಡೆಸುವ ವಿಶ್ವಾಸಲ್ಲಿದ್ದಾರೆ. ಅಧಿಕಾರ ಇಲ್ಲದೇ ಅನುದಾನ ದೊರೆಯದೇ ಕಾಮಗಾರಿ ಕೈಗೆತ್ತಿಕೊಳ್ಳಲು ಸದಸ್ಯರು ಸಹ ಹಿಂಜರಿ ಯುತ್ತಿದ್ದಾರೆ.

ಸರ್ಕಾರಕ್ಕೆ ಪತ್ರ: ಮೇಯರ್ ಉಪಮೇಯರ್ ಮೀಸಲಾತಿ ವಿಚಾರವಾಗಿ ಕಾನೂನಾತ್ಮಕ ಸಲಹೆ ಪಡೆಯಲು ತಡವಾಗಿದೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮಹಾನಗರ ಪಾಲಿಕೆ ಆಯುಕ್ತರು ಪತ್ರ ಬರೆದಿದ್ದಾರೆ. ಸರ್ಕಾರದಿಂದಲೂ ಸಹ ಚುನಾವಣೆ ನಡೆಸಲು ಯಾವುದೇ ಅಡೆ ತಡೆಗಳಿಲ್ಲ ಎಂದು ಉತ್ತರ ಸಹ ಬಂದಿದ್ದರೂ ಸಹ ಚುನಾವಣೆ ನಡೆಸಲು ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣ ಆಡಳಿತಗಾರರನ್ನು ನೇಮಕ ಮಾಡಲಾಗಿದೆ.

ಇನ್ನು 2023ರ ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿರುವ ರಾಜ್ಯದಲ್ಲಿ ಎಲ್ಲ ಪಕ್ಷದ ನಾಯಕರು ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಮಹಾನಗರ ಪಾಲಿಕೆಯ ಅಧಿಕಾರವನ್ನು ನೂತನ ಸದಸ್ಯರಿಗೆ ಹಂಚುವ ಧೈರ್ಯವನ್ನು ಜನಪ್ರತಿನಿಧಿಗಳು ಮಾಡುತ್ತಿಲ್ಲ, ಹೇಗಾದರೂ ಮಾಡಿ ವಿಧಾನ ಸಭೆ ಚುನಾವಣೆ ಮುಗಿದ ಮೇಲೆ ಅಧಿಕಾರ ನೀಡುವ ಯೋಚನೆಯಲ್ಲಿದ್ದಾರೆ. ಒಟ್ಟಾರೆ ಚುನಾವಣೆ ಗೆದ್ದರೂ ಅಧಿಕಾರ ವಿಲ್ಲದೇ ವಾರ್ಡ್ ಗಳಿಗೆ ಹೋಗಲು ನೂತನ‌ ಸದಸ್ಯರು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಮಹಾನಗರ ಪಾಲಿಕೆ ಮತ್ತೆ ಅಸ್ತಿತ್ವಕ್ಕೆ ಬಂದರೂ ನಮ್ಮ ವಾರ್ಡ್​ಗಳು ಸುಧಾರಣೆಯಾಗುತ್ತಿಲ್ಲ ಎಂದು ಸದಸ್ಯರಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಿ, ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ: ಶುಭ್ರ ಸೆಕ್ಸೆನಾ ಸೂಚನೆ

Last Updated : Feb 10, 2023, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.