ವಿಜಯಪುರ : ಕಳೆದ ಒಂದೂವರೆ ತಿಂಗಳಿನಿಂದ ನಗರದಲ್ಲಿ ಸಿಲುಕಿದ್ದ ರಾಜಸ್ಥಾನ ಮೂಲದ 26 ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದ ಜಿಲ್ಲಾಡಳಿತ ಕೆಎಸ್ಆರ್ಟಿಸಿ ಬಸ್ ಮೂಲಕ ಊರಿಗೆ ಕಳುಹಿಸಿಕೊಟ್ಟಿದೆ.
ಕಟ್ಟದ ಕಾರ್ಮಿಕರಾದ ಇವರು ಅತ್ತ ಕೆಲಸವಿಲ್ಲದೆ ಇತ್ತ ಊರಿಗೂ ಹೋಗಲಾಗದೆ ಕಳೆದ 45 ದಿನಗಳಿಂದ ನಗರದ ಕೆಇಬಿ ಸಭಾಭವನದಲ್ಲಿ ಉಳಿದುಕೊಂಡಿದ್ದರು. ಜಿಲ್ಲಾಡಳಿತ ಕಾರ್ಮಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡಿಕೊಟ್ಟಿತ್ತು. ಇದೀಗ ಊರಿಗೆ ಮರಳುವುದಾಗಿ ಎಲ್ಲರೂ ಆನ್ಲೈನ್ ಮೂಲಕ ನೋಂದಣಿ ಮಾಡಿ ಇ-ಪಾಸ್ ಪಡೆದುಕೊಂಡಿದ್ದರು. ಹೀಗಾಗಿ, ಜಿಲ್ಲಾಡಳಿತ ಆರೋಗ್ಯ ತಪಾಸಣೆ ನಡೆಸಿ ಊರಿಗೆ ಕಳುಹಿಸಿಕೊಟ್ಟಿದೆ.
ಈ ವೇಳೆ ವಿಜಯಪುರ ತಹಶೀಲ್ದಾರ್ ಮೀನಾ ಕುಮಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ ಇದ್ದರು.