ETV Bharat / state

ಮನೆ-ಮನೆಗೆ ತೆರಳಿ ನೌಕರರ ಮನವೊಲಿಸಿದ ಕೆಎಸ್‌ಆರ್‌ಟಿಸಿ ಡಿಸಿ

ಮುರ್ನಾಲ್ಕು ದಿನಗಳಿಂದ ಮುದ್ದೇಬಿಹಾಳ ಜಿಲ್ಲೆಯ ಇಂಡಿ, ಸಿಂದಗಿ, ಬಾಗೇವಾಡಿ, ತಾಳಿಕೋಟೆ ತಾಲೂಕುಗಳಲ್ಲಿರುವ ಸಾರಿಗೆ ನೌಕರರ ಮನೆ-ಮನೆಗೆ ತೆರಳಿ, ಅವರ ಮನವೊಲಿಸಿ ಸೇವೆಗೆ ಕರೆತಂದಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಡಿಸಿ ನಾರಾಯಣಪ್ಪ ಕುರುಬರ ಹೇಳಿದರು.

ಮನೆ-ಮನೆಗೆ ತೆರಳಿ ನೌಕರರ ಮನವೊಲಿಸಿದ ಕೆಎಸ್‌ಆರ್‌ಟಿಸಿ ಡಿಸಿ
author img

By

Published : Apr 12, 2021, 1:08 PM IST

ಮುದ್ದೇಬಿಹಾಳ (ವಿಜಯಪುರ): ವಿಜಯಪುರ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮುದ್ದೇಬಿಹಾಳದ ವಿವಿಧ ನಗರಗಳಲ್ಲಿರುವ ಸಾರಿಗೆ ನೌಕರರ ಮನೆ-ಮನೆಗೆ ತೆರಳಿ ಸೇವೆಗೆ ಹಾಜರಾಗುವಂತೆ ಮನವೊಲಿಸಿದರು.

ಮನೆ-ಮನೆಗೆ ತೆರಳಿ ನೌಕರರ ಮನವೊಲಿಸಿದ ಕೆಎಸ್‌ಆರ್‌ಟಿಸಿ ಡಿಸಿ

ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಕೊಡುವ ಅನ್ನದ ಮೇಲೆ ನಾವು ಬದುಕಿದ್ದೇವೆ. ಅವರಿಗೆ ತೊಂದರೆಯಾಗದಂತೆ ಸೇವೆ ಸಲ್ಲಿಸಬೇಕು. ನಮ್ಮ ಮನವಿಗೆ ಸ್ಪಂದಿಸಿರುವ ನೌಕರರು ಸೇವೆಗೆ ಹಾಜರಾಗುತ್ತಿದ್ದಾರೆ. ಮುರ್ನಾಲ್ಕು ದಿನಗಳಿಂದ ಜಿಲ್ಲೆಯ ಇಂಡಿ, ಸಿಂದಗಿ, ಬಾಗೇವಾಡಿ, ತಾಳಿಕೋಟೆ ತಾಲೂಕುಗಳಲ್ಲಿರುವ ಸಾರಿಗೆ ನೌಕರರ ಮನೆ-ಮನೆಗೆ ತೆರಳಿ, ಅವರ ಮನವೊಲಿಸಿ ಸೇವೆಗೆ ಕರೆತಂದಿದ್ದೇವೆ.

ಶ್ರೀಶೈಲದಲ್ಲಿ ಜಾತ್ರೆ ಜರುಗುತ್ತಿದ್ದು, ನಮ್ಮ ಭಾಗದ ಭಕ್ತರು ಮರಳಿ ಊರಿಗೆ ಹೋಗಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಶ್ರೀಶೈಲ ಪೀಠದಿಂದ ಪತ್ರ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಘಟಕಗಳಿಂದ 100 ಬಸ್‌ಗಳನ್ನು ಶ್ರೀಶೈಲಗೆ ಕಳಿಸಿದ್ದೇವೆ. ಇಬ್ಬರು ಅಧಿಕಾರಿಗಳು ಅಲ್ಲಿಯೇ ಇದ್ದು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ 28 ಬಸ್‌ಗಳು ಸಂಚಾರ ಕೈಗೊಂಡಿವೆ ಎಂದು ಮಾಹಿತಿ ನೀಡಿದರು.

ನಾನು ಬಂದ ಮೇಲೆ ಸಾರಿಗೆ ನೌಕರರಿಗೆ ಏನು ಸಹಾಯ ಮಾಡಿದ್ದೇನೆ ಎಂಬುದು ಅವರಿಗೆ ಗೊತ್ತಿದೆ. ಅದನ್ನು ಗಮನದಲ್ಲಿರಿಸಿಕೊಂಡು ಸೇವೆಗೆ ಬನ್ನಿ ಎಂದು ಕರೆದಿದ್ದೇನೆ. ಕೆಲವರು ಸಾರಿಗೆ ನೌಕರರ ಹೋರಾಟವನ್ನು ಹೈಜಾಕ್ ಮಾಡುತ್ತಿದ್ದಾರೆ. ನೌಕರರನ್ನು ಕ್ವಾಟ್ರರ್ಸ್​ಗಳಿಂದ ಹೊರಹಾಕುವುದಿಲ್ಲ. ನಮ್ಮ ಸಿಬ್ಬಂದಿಯ ಹೆಸರು ಕೆಡಬಾರದು ಎಂಬ ಉದ್ದೇಶದಿಂದ ನ್ಯಾಯಾಲಯದಲ್ಲಿ ಈ ಪ್ರತಿಭಟನೆ ನಡೆಸದಂತೆ ತಡೆ ಆದೇಶ ತರಲಾಗಿದೆ. ಜಿಲ್ಲೆಯಲ್ಲಿ ಯಾವುದೇ ನೌಕರರು ತಟ್ಟೆ, ಲೋಟ ಬಡಿಯುವ ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಗೋವಾದಿಂದ ಎರಡು ಬಸ್: ಮುಷ್ಕರದ ಲಾಭವನ್ನು ಅನ್ಯ ರಾಜ್ಯದವರು ಪಡೆದುಕೊಳ್ಳುತ್ತಿದ್ದಾರೆ. ನಿತ್ಯವೂ ಗೋವಾದಿಂದ ಮುದ್ದೇಬಿಹಾಳಕ್ಕೆ ಒಂದು ಬಸ್ ಬರುತ್ತಿದ್ದು, ಆದರೆ ಸೋಮವಾರ ಎರಡು ಬಸ್‌ಗಳಲ್ಲಿ ಪ್ರಯಾಣಿಕರನ್ನು ಕರೆತರಲಾಗಿದೆ. ನಮ್ಮ ಡಿಪೋದ ಬಸ್​ಗಳನ್ನು ಗೋವಾಗೆ ಬಿಟ್ಟಿದ್ದರೆ, ಆ ಆದಾಯ ನಮಗೆ ಬರುತ್ತಿತ್ತು ಎಂದರು.

ಇದನ್ನೂ ಓದಿ: ಮಂಗಳಾ ಅಂಗಡಿಗೆ ಅವಮಾನ ಮಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಬೇಕು: ಸಿದ್ದರಾಮಯ್ಯ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.