ETV Bharat / state

ಕ್ವಾರಂಟೈನ್​​ ಸೀಲ್ ಇದ್ದ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥನೆಂದು ತಪಾಸಣೆ ನಡೆಸಿಲ್ಲವಾ ಅಧಿಕಾರಿಗಳು?

author img

By

Published : Jul 8, 2020, 7:03 PM IST

Updated : Jul 8, 2020, 7:36 PM IST

ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದಿದ್ದ ಕಾರ್ಮಿಕರ ಪೈಕಿ ವ್ಯಕ್ತಿಯೊಬ್ಬನನ್ನು ಮಾನಸಿಕ ಅಸ್ವಸ್ಥನೆಂದುಕೊಂಡು ಪರಿಶೀಲನೆ ನಡೆಸದೆ ರೈಲ್ವೆ ನಿಲ್ದಾಣದಲ್ಲೇ ಅಧಿಕಾರಿಗಳು ಬಿಟ್ಟು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Health checkup
ಆರೋಗ್ಯ ತಪಾಸಣೆ

ವಿಜಯಪುರ: ಇಂದು ಬೆಳಗ್ಗೆ 7.30ರ ಸುಮಾರಿಗೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ 60ಕ್ಕೂ ಅಧಿಕ ಕಾರ್ಮಿಕರ ಪೈಕಿ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಪರಿಶೀಲನೆ ನಡೆಸದೆ ರೈಲ್ವೆ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾರೆ.

ಈ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಡಳಿತ ಅವರವರ ಊರುಗಳಿಗೆ ಕಳುಹಿಸಿ ಕ್ವಾರಂಟೈನ್​ಗೆ ಒಳಗಾಗುವಂತೆ ಸೂಚಿಸಿತು. ಅವರೊಂದಿಗೆ ಬಂದ ವ್ಯಕ್ತಿಯ ಬಳಿ ಟಿಕೆಟ್ ಇಲ್ಲವೆಂಬ ಕಾರಣಕ್ಕೆ ಹಾಗೂ ಮಾನಸಿಕ ಅಸ್ವಸ್ಥನಂತಿದ್ದ ಕಾರಣ ಪರಿಶೀಲನೆ ನಡೆಸದೇ, ರೈಲ್ವೆ ನಿಲ್ದಾಣದಲ್ಲೇ ಅಧಿಕಾರಿಗಳು ಬಿಟ್ಟು ಹೋಗಿದ್ದಾರೆ ಎನ್ನಲಾಗ್ತಿದೆ.

ಜಿಲ್ಲಾಧಿಕಾರಿ ವೈ.ಎಸ್​​.ಪಾಟೀಲ

ಬಳಿಕ ಆತ ಅಲ್ಲಿಂದ ನಗರದ ಬಸ್ ನಿಲ್ದಾಣದಲ್ಲಿ ಬಂದು ಮಲಗಿದ್ದಾನೆ. ಆತನ ಕೈಮೇಲೆ ಕ್ವಾರಂಟೈನ್​​ ಸೀಲ್ ಇರುವುದನ್ನು ಕಂಡು ಆತಂಕಕ್ಕೆ ಒಳಗಾಗಿದ ಸ್ಥಳೀಯರು, ಗೋಳಗುಮ್ಮಟ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ, ಆ್ಯಂಬುಲೆನ್ಸ್​​​ ಮೂಲಕ ಆತನನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.

ಕ್ವಾರಂಟೈನ್​ ಸೀಲ್​ ಇದ್ದರೂ ಆತನನ್ನು ಹೇಗೆ ಹೊರಗೆ ಬಿಟ್ಟರು ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 600ರ ಗಡಿ ದಾಟಿದೆ. ಜಿಲ್ಲಾಡಳಿತ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೊರೊನಾ ಹರಡುವುದನ್ನು ತಡೆಯಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Last Updated : Jul 8, 2020, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.