ವಿಜಯಪುರ: ನಾನು ಯಾರು ಗೊತ್ತಾ? ಎಂದು ಸಚಿವ ಉಮೇಶ್ ಕತ್ತಿ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ನೀಡಿದ ಉತ್ತರ ಕೇಳಿ ಸಚಿವರೇ ತಬ್ಬಿಬ್ಬಾದ ಪ್ರಸಂಗ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೋಳೆಗಾಂ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಇಂದು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತಾಳಿಕೋಟೆ ತಾಲೂಕಿಗೆ ಆಗಮಿಸಿದ್ದ ಸಚಿವ ಉಮೇಶ್ ಕತ್ತಿ, ಬೋಳೆಗಾಂ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವ ವೇಳೆ ತಾವು ಯಾರು ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ನೀವು ಪೊಲೀಸ್ ಎಂದಿದ್ದಾರೆ.
ತಾವು ಈ ರಾಜ್ಯ ಮತ್ತು ನಿಮ್ಮ ಜಿಲ್ಲೆಯ ಪಾಲಕ ಮಂತ್ರಿ ಉಮೇಶ್ ಕತ್ತಿ, ನಾನು ಪೊಲೀಸ್ ಅಲ್ಲ ಎಂದು ಹೇಳಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ನಿಮ್ಮವ್ವ, ಅಪ್ಪ ವೋಟ್ ಹಾಕಿದ್ದರಲ್ಲ, ಅದರಿಂದ ನಾನು ಆಯ್ಕೆಯಾದವ ಎಂದ ಸಚಿವರು ಮಕ್ಕಳ ಜೊತೆ ಕೆಲಕಾಲ ಮಾತುಕತೆ ನಡೆಸಿದರು.
ಇದನ್ನೂ ಓದಿ: ಮೋದಿ ಮನ್ ಕಿ ಬಾತ್ ಪ್ರೇರಣೆ: ಬಾಳೆ ದಿಂಡಿನಿಂದ ಬದುಕು ಚಿನ್ನವಾಗಿಸಿಕೊಂಡ ಮಹಿಳೆ