ETV Bharat / state

ಗಂಟಲು ದ್ರವ ಪರೀಕ್ಷೆಗೆ ಮತ್ತೆರಡು ಹೊಸ ಯಂತ್ರ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂತಸ - ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ವಿಜಯಪುರ ಜಿಲ್ಲೆಯ ಸಿ.ಬಿ. ನ್ಯಾಟ್ ಲ್ಯಾಬ್‍ಗೆ ಮತ್ತೆ ಎರಡು ಹೊಸ ಟ್ರ್ಯೂ ನ್ಯಾಟ್ ಯಂತ್ರಗಳ ಸೇರ್ಪಡೆಯಿಂದ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಪರೀಕ್ಷೆ ಕೈಗೊಳ್ಳಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

Two new machine for throat fluid test in Vijayapura
ಡಿಸಿ ವೈ.ಎಸ್ ಪಾಟೀಲ
author img

By

Published : May 14, 2020, 4:49 PM IST

ವಿಜಯಪುರ : ಕೋವಿಡ್-19 ರೋಗದ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲು ಜಿಲ್ಲೆಯಲ್ಲಿ ಈಗಾಗಲೇ ಲ್ಯಾಬ್ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಮತ್ತೆ ಎರಡು ಹೊಸ ಯಂತ್ರಗಳು ಜಿಲ್ಲೆಗೆ ಬಂದಿರುವುದರಿಂದ ಹೆಚ್ಚಿನ ಮಟ್ಟದಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯ ಸಿ.ಬಿ ನ್ಯಾಟ್ ಲ್ಯಾಬ್‍ಗೆ ಮತ್ತೆ ಎರಡು ಹೊಸ ಟ್ರ್ಯೂ ನ್ಯಾಟ್ ಯಂತ್ರಗಳ ಸೇರ್ಪಡೆಯಿಂದ ತುರ್ತು ಸಂದರ್ಭದಲ್ಲಿ ಪರೀಕ್ಷೆ ಕೈಗೊಳ್ಳಲು ಸಹಕಾರಿಯಾಗಿದ್ದು ಗರ್ಭಿಣಿ, ಐ.ಎಲ್.ಐ.ಗಳಂತಹ ಪ್ರಕರಣಗಳ ತುರ್ತು ಸಂದರ್ಭಗಳಲ್ಲಿ ಬಹಳಷ್ಟು ಉಪಯೋಗವಾಗಲಿದೆ. ಬೆಂಗಳೂರು, ಕಲಬುರಗಿಗೆ ಗಂಟಲು ದ್ರವ ಮಾದರಿ ಕಳಿಸುವುದು ಕಡಿಮೆಯಾಗಲಿದ್ದು ಜಿಲ್ಲೆಯಲ್ಲಿಯೇ ಒಂದು ದಿನಕ್ಕೆ 24 ರಿಂದ 50 ರಷ್ಟು ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಮಾಡುವಷ್ಟು ಸಾಮರ್ಥ್ಯವನ್ನು ಲ್ಯಾಬ್ ಪಡೆದುಕೊಂಡಿದೆ ಎಂದು ಹೇಳಿದರು.

ಗೋವಾ ರಾಜ್ಯದಿಂದ ಬರುವವರಿಗೆ ಹೋಂ ‍ಕ್ವಾರಂಟೈನ್ ಹಾಗೂ ಇತರೆ ರಾಜ್ಯಗಳಿಂದ ಆಗಮಿಸುತ್ತಿರುವ ಜನರಿಗೆ ಜಿಲ್ಲಾಡಳಿತದಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದ್ದೆ. ಹೊರ ರಾಜ್ಯದಿಂದ ಬಂದವರು ಸೋಂಕಿತರು ಅಥವಾ ಶಂಕಿತರು ಎಂದು ಹೇಳುವುದು ಕಷ್ಟ. ನಾನಾ ಕಾರಣಗಳಿಂದ ಅನ್ಯ ರಾಜ್ಯಗಳಿಗೆ ದುಡಿಯಲು ಹೋದವರು ಮರಳಿ ತಮ್ಮ ಊರುಗಳಿಗೆ ಬಂದಿದ್ದಾರೆ. ಅವರನ್ನು ತಮ್ಮ ತಮ್ಮ ಊರುಗಳಲ್ಲಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಾಂಸ್ಥಿಕ ಕ್ವಾರಂಟೈನ್ ಆದವರಿಗೆ ಜಿಲ್ಲಾಡಳಿತದ ವತಿಯಿಂದ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಆಹಾರ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದೆ. ಕ್ವಾರಂಟೈನ್ ಆದ ವ್ಯಕ್ತಿಗಳು ಹೊರಗೆ ಹೋಗುವುದಾಗಲಿ, ತಮ್ಮ ಮನೆಗಳಿಗೆ ಹೋಗುವುದಾಗಲಿ ಮಾಡುವಂತಿಲ್ಲ. ಅಂತವರು ಕಂಡುಬಂದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಿಳಿಸಬೇಕು. ಕೋವಿಡ್-19 ನಿಯಂತ್ರಣಕ್ಕಾಗಿ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದಾಗಿ, ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳುವವರಿಗೆ ಸೇವಾ ಸಿಂಧು ಜಾಲತಾಣದ ಮೂಲಕ ನೋಂದಣಿ ಮಾಡಿ ಬೇರೆ ರಾಜ್ಯಗಳಿಗೆ ತೆರಳಬಹುದಾಗಿದೆ.

ಹೊರ ರಾಜ್ಯಗಳಿಂದ ಜಿಲ್ಲೆಗೆ ಯಾರಾದರು ಮಾಹಿತಿ ಇಲ್ಲದೇ ಆಗಮಿಸಿದ್ದರೆ ಅಂಥವರ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಸೇವಾ ಸಿಂಧು ಆ್ಯಪ್‍ನಲ್ಲಿ ಪಾಸ್ ಮಾಡಿಕೊಡಲು ಹಣ ವಸೂಲಿ ಮಾಡುವುದಾಗಲಿ ಅಥವಾ ಈ ಸಂಕಷ್ಟದ ಪರಿಸ್ಥಿಯನ್ನು ದೂರುಪಯೋಗ ಪಡಿಸಿಕೊಳ್ಳುತ್ತಿರುವುದು ಜಿಲ್ಲಾಡಳಿತ ಗಮನಕ್ಕೆ ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 2,223 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. 825 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 1360 ಜನರು (1 ರಿಂದ 28 ದಿನಗಳ) ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ಮೂರು ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ.

35 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 14 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 2651 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 2579 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 20 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಗೆ ದೇಶದ ವಿವಿಧ ರಾಜ್ಯಗಳಿಂದ 6,200 ಜನರು ಆಗಮಿಸಿದ್ದು, ಈ ಪೈಕಿ 5000 ಜನರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಉಳಿದವರು ಇತರೆ ರಾಜ್ಯಗಳಿಂದ ಬಂದವರಾಗಿದ್ದಾರೆ. ಇವರನ್ನು ಹೊರತುಪಡಿಸಿ ಗೋವಾ ರಾಜ್ಯದಿಂದ 2348 ಜನರು ಆಗಮಿಸಿದ್ದು, ಗೋವಾ ರಾಜ್ಯದಿಂದ ಬಂದ ಜನರನ್ನು ಮಾತ್ರ ಹೋಮ್‍ ಕ್ವಾರಂಟೈನ್ ಮಾಡಲಾಗಿದೆ.

ಅದರಂತೆ ವಿವಿಧ ಜಿಲ್ಲೆಗಳಿಂದ 25 ಸಾವಿರ ಜನರು ಆಗಮಿಸಿದ್ದು, ಗೋವಾದಿಂದ ಬಂದವರನ್ನು ಹೊರತುಪಡಿಸಿ ಇತರ ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.