ETV Bharat / state

ವಿಜಯಪುರ ಹೋಟೆಲ್​ ರೂಮ್‌ನಲ್ಲಿ ಇಬ್ಬರ ಶವ ಪತ್ತೆ: ಜೊತೆಗಾರನ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಶಂಕೆ - ವಿಜಯಪುರದ ಹೋಟೆಲ್​ ರೂಮ್‌

ವಿಜಯಪುರದ ಹೋಟೆಲ್​ ರೂಮ್‌ನಲ್ಲಿ ಇಬ್ಬರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ.

two-dead-bodies-found-in-a-hotel-at-vijayapura
ವಿಜಯಪುರ : ಹೋಟೆಲ್​ ರೂಮ್‌ನಲ್ಲಿ ಎರಡು ಶವ ಪತ್ತೆ
author img

By

Published : Mar 24, 2023, 1:12 PM IST

Updated : Mar 24, 2023, 5:03 PM IST

ಎಸ್​ಪಿ ಆನಂದಕುಮಾರ್

ವಿಜಯಪುರ : ನಗರದ ರಾಜಧಾನಿ ಹೋಟೆಲ್​ನ ರೂಮ್‌ನಲ್ಲಿ ಅನುಮಾನಸ್ಪದವಾಗಿ ಎರಡು ಶವ ಪತ್ತೆಯಾಗಿವೆ. ಬಳ್ಳಾರಿ ಮೂಲದ ಸಿ ಇಂದ್ರಕುಮಾರ ಹಾಗೂ ಮತ್ತೋರ್ವನ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಾಂಡಾ ನಿವಾಸಿ ಸಿ ಇಂದ್ರಕುಮಾರ ಎಂಬಾತನನ್ನು ಜೊತೆಗಿದ್ದ ಯುವಕ ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಶರಣಾದವನ ಹೆಸರು ತಿಳಿದುಬಂದಿಲ್ಲ.

ರಾಜಧಾನಿ ಲಾಡ್ಜ್ ರೂಮ್ ನಂಬರ್​ 114 ರಲ್ಲಿ ಎರಡು ಶವಗಳು ಹತ್ತಿರ ಹತ್ತಿರವಾಗಿ ಬಿದ್ದಿರುವುದು ಪತ್ತೆಯಾಗಿದೆ. ಇಂದ್ರಕುಮಾರ ಎಂಬುವರು ಇದೇ ಮಾರ್ಚ್ 22ರಂದು ಲಾಡ್ಜ್​ಗೆ ಆಗಮಿಸಿ ಆಧಾರ್​ ಕಾರ್ಡ್ ತೋರಿಸಿ ರೂಮ್ ನಂ 114 ಪಡೆದುಕೊಂಡಿದ್ದರು. ನಂತರ ಇವರ ರೂಮ್​ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವುದು ಸ್ವತಃ ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ಗೊತ್ತಾಗಿಲ್ಲ. ಎರಡು ದಿನ ರೂಮ್ ಬಾಗಿಲು ಸಹ ತೆರೆದಿರಲಿಲ್ಲ ಎಂಬುದು ತಿಳಿದುಬಂದಿದೆ.

ಈ ಬಗ್ಗೆ ಎಸ್​ಪಿ ಆನಂದಕುಮಾರ್ ಅವರು ಪ್ರತಿಕ್ರಿಯಿಸಿದ್ದು, ರಾಜಧಾನಿ ಹೋಟೆಲ್​ನಲ್ಲಿ ಇಬ್ಬರು ಯುವಕರ ಸಾವು ನಡೆದಿದೆ. ರೂಮ್ ನಂಬರ್​ 114 ರಲ್ಲಿ ಒಬ್ಬರ ಮೇಲೆ ಒಬ್ಬರು ಇದ್ದಂತಹ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿವೆ. ಇದರಲ್ಲಿ ಮೇಲಿನ ವ್ಯಕ್ತಿ ಇನ್ನೊಬ್ಬನನ್ನು ಕಟ್ಟರ್​​ನಿಂದ ಸೀಳಿ ತದನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವಂತಹ ಅನುಮಾನ ಕಂಡುಬರುತ್ತಿದೆ. ಸದ್ಯ ಒಬ್ಬ ವ್ಯಕ್ತಿಯ ಹೆಸರು ಇಂದ್ರಕುಮಾರ್ ಎಂಬುದು ತಿಳಿದುಬಂದಿದೆ. ಹೋಟೆಲ್ ಬುಕ್ ಮಾಡಿಕೊಳ್ಳುವ ವೇಳೆ ಆಧಾರ್​ ಕಾರ್ಡ್ ತೋರಿಸಿ ಇಂದ್ರಕುಮಾರ್ ಎಂದು ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಐಡೆಂಟಿಫಿಕೇಷನ್ ಮಾಡಬೇಕಾಗಿದೆ. ಇಂದ್ರಕುಮಾರ್ ಎಂಬಾತ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಾಂಡಾ ನಿವಾಸಿ ಎಂಬುದು ಗೊತ್ತಾಗಿದೆ ಎಂದರು.

ಆ ದ್ವಿಚಕ್ರ ವಾಹನದ ನಂಬರ್​ ಅನ್ನು ನೋಡಲಾಗಿ ಅದು ಅರಕೆರೆ ತಾಂಡಾದ ಒಂದು ವ್ಯಕ್ತಿಯ ಹೆಸರಿನಲ್ಲಿ ರಿಜಿಸ್ಟ್ರೇಷನ್​ ಆಗಿದೆ. ಈಗ ನಾವು ವೈಜ್ಞಾನಿಕವಾಗಿ ಯಾವೆಲ್ಲಾ ಮಾಹಿತಿಯನ್ನು ಕಲೆಕ್ಟ್​ ಮಾಡಬೇಕೋ ಅದನ್ನು ನಾವು ಮಾಡುತ್ತಿದ್ದೇವೆ. ಈಗಾಗಲೆ ಸ್ಥಳಕ್ಕೆ ಶ್ವಾನಗಳು, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದು ಮೇಲ್ನೋಟಕ್ಕೆ ಒಬ್ಬ ಇನ್ನೊಬ್ಬರನ್ನು ಕೊಂದು ತಾನೂ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವಂತೆ ಈಗ ಕಂಡುಬರುತ್ತಿದೆ ಎಂದು ತಿಳಿಸಿದರು.

ಬೆರಳಚ್ಚು ತಜ್ಞರಿಂದ ಮಾಹಿತಿ ಸಂಗ್ರಹ : ಏಕೆಂದರೆ ಆ ಡೋರ್ ಎರಡು ದಿನಗಳ ಕಾಲ ಒಳಗಿನಿಂದ ಲಾಕ್ ಆಗಿದ್ದಂತಹ ಸ್ಥಿತಿಯಲ್ಲಿ ಕಂಡುಬಂದಿದೆ. ಆದರೆ ಹೋಟೆಲ್ ಸಿಬ್ಬಂದಿ ಡೋರ್​ ಅನ್ನು ಬಡಿದು ಅವರನ್ನು ಹೊರಗೆ ಕರೆತರಲು ಯತ್ನಿಸಿದ್ದಾರೆ. ಆದರೆ ಅವರು ಬಂದಿಲ್ಲ. ಅಲ್ಲದೇ ರೂಮ್​ನ ಒಳಗಡೆಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ಅವರು ಅನುಮಾನಗೊಂಡು ಅವರ ಮಾಸ್ಟರ್​ ಕೀಯಿಂದ ಓಪನ್ ಮಾಡಿದಾಗ ಅವರು ಈ ರೀತಿ ಸಾವಾಗಿರುವುದು ಕಂಡುಬಂದಿದೆ. ನಂತರ ತಮ್ಮ ಗಾಂಧಿಚೌಕ್ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ತದನಂತರ ಸ್ಥಳಕ್ಕೆ ತಮ್ಮ ಡಿವೈಎಸ್​ಪಿ ಸಿದ್ದೇಶ್ವರ್​​, ಇನ್ಸ್​ಪೆಕ್ಟರ್​ ಮುರುಗುಂಡಿ ಇಬ್ಬರು ಬಂದು ವೇರಿಫೈ ಮಾಡಿದ್ದಾರೆ. ಹೀಗಾಗಿ ನಾನೂ ಕೂಡಾ ಬಂದಿದ್ದೇನೆ. ತನಿಖೆ ಮುಂದುವರೆಯಲಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1. 5 ಲಕ್ಷ ಹಣ ಜಪ್ತಿ : ಇನ್ನೊಂದೆಡೆ ವಿಧಾನಸಭೆ ಚುನಾವಣೆ ನಿಗದಿ ಮುನ್ನವೇ ವಿಜಯಪುರ ಜಿಲ್ಲಾಡಳಿತ ಫುಲ್​​ ಅಲರ್ಟ್ ಆಗಿದ್ದು, ಮಹಾರಾಷ್ಟ್ರ ಸೇರಿದಂತೆ ವಿವಿಧ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಕ್ರಾಸ್ ಬಳಿಯ ಚೆಕ್​ಪೋಸ್ಟ್​ನಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. 1.5 ಲಕ್ಷ ಹಣ ನಗದು ಜಪ್ತಿಯಾಗಿದೆ. ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಪಿಎಸ್ಐ ಹೆಚ್ ವೈ ಬಾಲದಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಯಿತು.

ದಾಖಲೆ ಇಲ್ಲದ ಹಣ ವಶಕ್ಕೆ ಪಡೆದ ಪೊಲೀಸರು
ದಾಖಲೆ ಇಲ್ಲದ ಹಣ ವಶಕ್ಕೆ ಪಡೆದ ಪೊಲೀಸರು

ಬಾಗಲಕೋಟೆ ಜಿಲ್ಲೆಯ ಇಳಕಲ್​ನಿಂದ ವಿಜಯಪುರಕ್ಕೆ ಟಾಟಾ ನೆಕ್ಷಾನ್ ಕಾರಿನಲ್ಲಿ ಸಂಚರಿಸುತ್ತಿದ್ದವರು ಪೊಲೀಸರು ತಡೆದು ತಪಾಸಣೆ ಮಾಡಿದಾಗ ₹ 1.5 ಲಕ್ಷ ರೂ ಪತ್ತೆಯಾಗಿದೆ. ಈ ಸಂಬಂಧ ಶಂಕರಪ್ಪ ಕಡಮಾನೂರ ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.‌ ನಿಡಗುಂದಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.‌

ಇದನ್ನೂ ಓದಿ: ಸಿಗರೇಟ್ ಸೇದುವ ವಿಚಾರಕ್ಕೆ ಗೆಳೆಯರ‌ ಗಲಾಟೆ, ಓರ್ವನ ಕೊಲೆ

Last Updated : Mar 24, 2023, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.