ETV Bharat / state

ವಿಜಯಪುರದಲ್ಲಿ ಕೋವಿಡ್​ ಸೋಂಕಿತ ಇಬ್ಬರ ಸಾವು.. ಒಂದೇ ಕುಟುಂಬದ 6 ಜನರಿಗೆ ಸೋಂಕು - ಕೋವಿಡ್​​-19 ಸಾವು ಪ್ರಕರಣಗಳು

ರಾಜ್ಯದಲ್ಲಿ ಕೋವಿಡ್​ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಕೂಡಾ ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆ ಸಾವನ್ನಪ್ಪಿದ್ದ ಇಬ್ಬರ ಗಂಟಲು ದ್ರವ ಮಾದರಿ ವರದಿ ಇಂದು ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

two-corona-patient-death-in-vijayapura
ಜಿಲ್ಲಾಧಿಕಾರಿ ವೈ ಎಸ್ ಪಾಟೀಲ
author img

By

Published : Jul 11, 2020, 9:35 PM IST

ವಿಜಯಪುರ/ಮುದ್ದೇಬಿಹಾಳ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್‌ದಿಂದ ಮತ್ತೆ ಇಬ್ಬರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 15ಕ್ಕೆ ಏರಿದೆ.

ಇಂಡಿ ತಾಲೂಕಿನ ಗುಬ್ವೆವಾಡ ಗ್ರಾಮದ 65 ವರ್ಷದ ವ್ಯಕ್ತಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಜು‌ಲೈ 5ರಂದು ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದರು. ಇವರ ಸ್ವಾಬ್​​ ವರದಿ ಇಂದು ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಇನ್ನು, ವಿಜಯಪುರ ನಗರದ ಅಕ್ಕಿ ಕಾಲೋನಿ ನಿವಾಸಿ 72 ವರ್ಷದ ಪುರುಷ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಿಸದೆ ಜುಲೈ 9ರಂದು ಮೃತಪಟ್ಟಿದ್ದು, ವ್ಯಕ್ತಿಯ ಗಂಟಲು ದ್ರವ ಮಾದರಿ ವರದಿ ಇಂದು ಬಂದಿದ್ದು, ಕೋವಿಡ್​ ತಗುಲಿರುವುದಾಗಿ ದೃಢಪಟ್ಟಿದೆ.

ಮೃತರಿಬ್ಬರಿಗೂ ಹೃದ್ರೋಗ ಸಂಬಂಧ ಸಮಸ್ಯೆ ಇದ್ದುದಾಗಿ ವೈದ್ಯರು ತಿಳಿಸಿದ್ದಾರೆ. ಸಕಲ ವೈದ್ಯಕೀಯ, ದಾರ್ಮಿಕ ಶಿಷ್ಟಾಚಾರದಂತೆ ಅಂತ್ಯಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಹೇಳಿದರು.

ವಿಜಯಪುರದಲ್ಲಿ ಕೋವಿಡ್​ ಸೋಂಕಿತ ಇಬ್ಬರ ಸಾವು

ಒಂದೇ ಕುಟುಂಬ ಆರು ಜನರಿಗೆ ತಗುಲಿದ ಕೊರೊನಾ

ತಾಳಿಕೋಟಿ ಪಟ್ಟಣದಲ್ಲಿ ಒಂದೇ ಕುಟುಂಬ ಆರು ಜನರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು ಸೋಂಕಿತರು ಕಂಡು ಬಂದಿರುವ ಪ್ರದೇಶಗಳನ್ನು ತಾಲೂಕಾಡಳಿತ ಸೀಲ್‌ಡೌನ್ ಮಾಡಿದೆ. ಪಟ್ಟಣದ ಮಿಲತ್‌ನಗರ, ಕುಂಬಾರಗಲ್ಲಿ, ಗಣೇಶನಗರ, ರಜಪೂತಗಲ್ಲಿ ಬಡಾವಣೆಗಳ ಪ್ರದೇಶಗಳನ್ನು 100 ಮೀಟರ್‌ವರೆಗೆ ಕಂಟೇನ್ಮೆಂಟ್ ಪ್ರದೇಶಗಳೆಂದು ಜಿಲ್ಲಾಡಳಿತದ ಸೂಚನೆಯ ಮೇರೆಗೆ ತಾಲೂಕಾಡಳಿತ ಘೋಷಣೆ ಮಾಡಿದೆ.

ತಾಳಿಕೋಟೆ ಪಟ್ಟಣದಲ್ಲಿ ಜುಲೈ 10ರಂದು 11 ಜನರಿಗೆ ಕೋವೀಡ್-19 ಸೋಂಕು ತಗುಲಿದ್ದು, ಮಿಲತ್‌ನಗರ ಪ್ರದೇಶದ ಒಂದೇ ಕುಟುಂಬದ ಆರು ಜನರಿಗೆ ಮತ್ತು ಪಕ್ಕದ ಮನೆಯ ಓರ್ವನಿಗೆ ಸೋಂಕು ತಗುಲಿದೆ. ಕುಂಬಾರ ಗಲ್ಲಿ ಬಡಾವಣೆಯ ಓರ್ವನಿಗೆ, ರಜಪೂತ ಗಲ್ಲಿ ಬಡಾವಣೆಯ ಓರ್ವ ಮಹಿಳೆಗೆ, ಗಣೇಶ ನಗರ ಬಡಾವಣೆಯ 2 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಆಯಾ ಪ್ರದೇಶಗಳಲ್ಲಿ ಸೀಲ್‌ಡೌನ್ ಮಾಡಲಾಗಿದ್ದು, ಎಲ್ಲ ಸುತ್ತಲಿನ ರಸ್ತೆಗಳಿಗೆ ಪುರಸಭೆ ಪೊಲೀಸ್ ಇಲಾಖೆಯು ಬಾರಿಕೇಡ್‌ಗಳನ್ನು, ಮುಳ್ಳು ಕಂಠಿಗಳನ್ನು ಕಟ್ಟಿ ಆ ಪ್ರದೇಶದೊಳಗೆ ಯಾರೂ ಹೋಗದಂತೆ ಮತ್ತು ಅಲ್ಲಿಂದ ಯಾರೂ ಹೊರಬರದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಅಗತ್ಯ ಕ್ರಮಕೈಗೊಂಡಿದ್ದಾರೆ. ಗಣೇಶ ನಗರ ಬಡಾವಣೆಯಲ್ಲಿ ಇಬ್ಬರು ಸೋಂಕಿತರು ರಾಜಸ್ಥಾನದ ಮೂಲದವರಿದ್ದು ಅವರು ಕಟ್ಟಡ ಕಾರ್ಮಿಕರೆಂದು ತಿಳಿದು ಬಂದಿದೆ.

ಅಗತ್ಯ ವಸ್ತು ಪೂರೈಕೆಗೆ ಕ್ರಮ : ತಾಲೂಕಾಡಳಿತವು ಸೀಲ್‌ಡೌನ್‌ಗೊಂಡ ಪ್ರದೇಶದೊಳಗಿನ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ಕ್ರಮಕೈಗೊಂಡಿದೆ. ಕಾಯಿಪಲ್ಲೆ, ಹಾಲು, ಕಿರಾಣಿ, ಕುಡಿಯುವ ನೀರು ಒಳಗೊಂಡು ಅಗತ್ಯ ವಸ್ತುಗಳು ಅಲ್ಲಿಯೇ ಸಿಗುವಂತೆ ವ್ಯವಸ್ಥಿತ ಕ್ರಮಕೈಗೊಂಡಿದೆ.

ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸೀಲ್‌ಡೌನ್ ಪ್ರದೇಶದೊಳಗಿನ ಜನರಿಗೆ ಥರ್ಮಲ್ ಸ್ಕ್ಯಾನಿಂಗ್​, ಸೋಂಕಿನ ಲಕ್ಷಣಗಳ ಕುರಿತು ಆರೋಗ್ಯ ತಪಾಸಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನೆಲ್ಲ ಹೋಮ್​​ ಕ್ವಾರಂಟೈನ್‌ಗೆ ತಾಲೂಕಾಡಳಿತ ಒಳಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.