ETV Bharat / state

ವಿಜಯಪುರದಲ್ಲಿ ಗುಡಿಸಲಿಗೆ ಆಕಸ್ಮಿಕ ಬೆಂಕಿ: ದಂಪತಿ ಸಜೀವ ದಹನ

ಆಕಸ್ಮಿಕ ಅಗ್ನಿ ಅವಘಡದ ಪರಿಣಾಮ ಗುಡಿಸಲಿನಲ್ಲಿದ್ದ ಪತಿ, ಪತ್ನಿ ಇಬ್ಬರೂ ಸಜೀವ ದಹನವಾಗಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಘಟನೆ ನಡೆದಿದೆ.

fire accident
ಗುಡಿಸಲಿಗೆ ಆಕಸ್ಮಿಕ ಬೆಂಕಿ
author img

By

Published : Feb 26, 2023, 9:54 AM IST

Updated : Feb 26, 2023, 10:49 AM IST

ಇಬ್ಬರು ಸಜೀವ ದಹನ

ವಿಜಯಪುರ: ಗುಡಿಸಲಿಗೆ ಬೆಂಕಿ ತಗುಲಿ ದಂಪತಿ ಸಜೀವ ದಹನವಾಗಿದ್ದಾರೆ. ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ನಿನ್ನೆ(ಶನಿವಾರ) ರಾತ್ರಿ ಘಟನೆ ನಡೆದಿದೆ. ಮೃತರನ್ನು ಕರೀಂ‌ಸಾಬ್ ಟಪಾಲ್ (82) ಹಾಗೂ ಅವರ ಪತ್ನಿ ಸಾಜನಬಿ ಟಪಾಲ್ (72) ಎಂದು ಗುರುತಿಸಲಾಗಿದೆ. ಗುಡಿಸಲಿನಲ್ಲಿ ಮಲಗಿದ್ದಾಗ ಚಿಮಣಿಯಿಂದ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಚಡಚಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಇದನ್ನು ಹೊರತುಪಡಿಸಿ ದೇಶದ ವಿವಿಧೆಡೆ ಇತ್ತೀಚೆಗೆ ನಡೆದ ಅಗ್ನಿ ಅನಾಹುತಗಳನ್ನು ನೋಡುವುದಾದರೆ,

ಮನೆಗಳು ಬೆಂಕಿಗಾಹುತಿ: ಅಸ್ಸೋಂನ ಗುವಾಹಟಿ ನಗರದ ಹಟಿಗಾಂವ್ ಚರಿಯಾಲಿಯಲ್ಲಿ ಇತ್ತೀಚೆಗೆ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಸುಮಾರು 100ಕ್ಕೂ ಅಧಿಕ ಮನೆಗಳು ಬೆಂಕಿಗೆ ಆಹುತಿಯಾಗಿದ್ದವು. ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹಾನಿಯಾಗಿತ್ತು ಎಂದು ಅಂದಾಜಿಸಲಾಗಿತ್ತು. ಹಟಿಗಾಂವ್‌ನ ಅಜಂತಾ ರಸ್ತೆಯ ರಿಜು ಅಲಿ ಎಂಬುವರ ಬಾಡಿಗೆ ಮನೆಯಲ್ಲಿ ಈ ಅನಾಹುತ ನಡೆದಿದೆ. ಅಗ್ನಿ ಜ್ವಾಲೆ ಇಡೀ ವಸತಿ ಪ್ರದೇಶವನ್ನೇ ಆವರಿಸಿತ್ತು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಬಾಡಿಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿದೆ ಎಂದು ಕೆಲವರು ಶಂಕಿಸಿದ್ದಾರೆ. ಸುಮಾರು 15 ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಅವಘಡದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ಭೀಕರ ಅಗ್ನಿ ಅವಘಡ: 100ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿ

ಹೊತ್ತಿದ ಜೋರ್ಹತ್ ಪಟ್ಟಣ: ಇತ್ತೀಚೆಗೆ ಜೋರ್ಹತ್ ಪಟ್ಟಣದಲ್ಲಿ ಬೃಹತ್​ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿಯ ಕೆನ್ನಾಲಿಗೆಗೆ ಜೋರ್ಹತ್ ನಗರದ ಮಧ್ಯಭಾಗದಲ್ಲಿರುವ ಐತಿಹಾಸಿಕ ಚೌಕ್ ಬಜಾರ್ ಸಂಪೂರ್ಣ ನಾಶವಾಗಿದೆ. ಬಜಾರ್‌ನಲ್ಲಿನ 530 ವ್ಯಾಪಾರಿ ಮಳಿಗೆಗಳು ಸುಟ್ಟು ಕರಕಲಾಗಿದ್ದವು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಆದರೆ ಕೆಲ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ ಎಂದು ಕೆಲವು ಉದ್ಯಮಿಗಳು ಆರೋಪಿಸಿದ್ದರು.

ಇದನ್ನೂ ಓದಿ: ಹೊತ್ತಿ ಉರಿದ ಜೋರ್ಹತ್ ಪಟ್ಟಣ: ಕ್ಷಣಾರ್ಧದಲ್ಲಿ ಐತಿಹಾಸಿಕ ಚೌಕ್ ಬಜಾರ್ ನಾಶ

Last Updated : Feb 26, 2023, 10:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.