ETV Bharat / state

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​​: ಆಯುಕ್ತರ ಮೇಲೆಯೇ ಹಲ್ಲೆ ಆರೋಪ - ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ

ಪೊಲೀಸರು ಸಮರ್ಥನನ್ನು ಕರೆದುಕೊಂಡು ಆದರ್ಶನಗರ ಪೊಲೀಸ್ ಠಾಣೆಗೆ ತೆರಳಿದಾಗ, ಆಯುಕ್ತರು ಠಾಣೆಯಲ್ಲಿ ತಮ್ಮ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಸಮರ್ಥ ಹಾಗೂ ಇನ್ನೂ ನಾಲ್ಕೇದು ಜನರ ಮೇಲೆ ಎಫ್​ಐಆರ್ ದಾಖಲಿಸಿ ಸಮರ್ಥನನ್ನು ಬಂಧಿಸಿದ್ದಾರೆ ಎಂದು ಸಮರ್ಥ ಸಿಂದಗಿ ತಾಯಿ ಹಾಗೂ ಜೆಡಿಎಸ್ ಮುಖಂಡೆ ಸ್ನೇಹಲತಾ ದೂರಿದರು.

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಮೇಲಿನ ಹಲ್ಲೆ ಪ್ರಕರಣ

author img

By

Published : Dec 22, 2021, 5:56 PM IST

ವಿಜಯಪುರ: ಮಹಾನಗರ ಪಾಲಿಕೆ ಆಯುಕ್ತ ವಿಜಯ ಮಕ್ಕಳಕಿ ಮೇಲೆ ಹಲ್ಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಬಂಧಿತನಾಗಿರುವ ಸಮರ್ಥ ಸಿಂದಗಿ ತಾಯಿ ಹಾಗೂ ಜೆಡಿಎಸ್ ಮುಖಂಡೆ ಸ್ನೇಹಲತಾ, ಇದರಲ್ಲಿ ತಮ್ಮ ಮಗನ ಪಾತ್ರ ಏನು ಇಲ್ಲ ನಮ್ಮ ಮನೆಯ ಕೆಲಸ ಮಾಡುವ ಸುರೇಶ ಓಡಿಸುತ್ತಿದ್ದ ಬೈಕ್ ಆಯುಕ್ತರ ಸ್ವಂತ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ನೆಪ ಇಟ್ಟುಕೊಂಡು ಆತನ ಮೇಲೆ ಆಯುಕ್ತರು ಹಾಗೂ ಅವರ ಪತ್ನಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ ನಡೆದ ಘಟನೆಯನ್ನು ತಮ್ಮ ಪುತ್ರ ಸಮರ್ಥಗೆ ತಿಳಿಸಿದ್ದಾನೆ. ಆತ ಘಟನಾ ಸ್ಥಳಕ್ಕೆ ಹೋದಾಗ ಮಾತಿಗೆ ಮಾತು ಬೆಳೆದಿರಬಹುದು. ನಂತರ ಪೊಲೀಸರು ಸಮರ್ಥನನ್ನು ಕರೆದುಕೊಂಡು ಆದರ್ಶನಗರ ಪೊಲೀಸ್ ಠಾಣೆಗೆ ತೆರಳಿದಾಗ, ಆಯುಕ್ತರು ಠಾಣೆಯಲ್ಲಿ ತಮ್ಮ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಸಮರ್ಥ ಹಾಗೂ ಇನ್ನೂ ನಾಲ್ಕೇದು ಜನರ ಮೇಲೆ ಎಫ್​ಐಆರ್ ದಾಖಲಿಸಿ ಸಮರ್ಥನನ್ನು ಬಂಧಿಸಿದ್ದಾರೆ ಎಂದು ದೂರಿದರು.

ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಕುಟುಂಬ ಸದಸ್ಯರ ಜತೆ ಸ್ವಂತ ಕಾರಿನಲ್ಲಿ ಬಂದಿದ್ದಾರೆ. ಆದರೆ, ಮಾಧ್ಯಮದ ಎದುರು ತಾವು ರಸ್ತೆ ಕಾಮಗಾರಿ ವೀಕ್ಷಿಸಲು ಬಂದಿರುವುದಾಗಿ ತಿಳಿಸಿದ್ದಾರೆ. ಹಲ್ಲೆ ಮಾಡಿದ್ದಾರೆ ಎನ್ನಲಾದ ಯುವಕರಿಗೆ ಇವರು ಆಯುಕ್ತರು ಎಂದು ಗೊತ್ತಿರಲಿಲ್ಲ, ಮಾತಿನ ಭರದದಲ್ಲಿ ಏನಾದರೂ ಆಗಿರಬಹುದು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ರೀತಿ ಅಧಿಕಾರಿಯೊಬ್ಬರು ನಡೆದುಕೊಂಡಿರುವುದನ್ನು ಖಂಡಿಸುತ್ತೇನೆ ಎಂದರು.

ನಾವು ಸಹ ದೂರು ದಾಖಲಿಸಲು ಮುಂದಾಗಿದ್ದೇವೆ. ಪೊಲೀಸ್ ಠಾಣೆಯಲ್ಲಿ ದೂರು ತೆಗೆದುಕೊಳ್ಳದ್ದಿದ್ದರೆ, ನ್ಯಾಯಾಲಯದ ಮೂಲಕ ದೂರು ದಾಖಲಿಸಿ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ : ವಿಜಯಪುರ: ಪಾಲಿಕೆ ಆಯುಕ್ತರ ಮೇಲೆ ಹಲ್ಲೆ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಸರು ತಳುಕು

ತಮ್ಮ ಮಗ ಸಮರ್ಥ ಧಮ್ಕಿ ಹಾಕಿದ್ದಾನೆ ಎಂದು ಆಯುಕ್ತರು ಮಾಡಿದ ಆರೋಪಕ್ಕೂ ಉತ್ತರ ನೀಡಿದ ಸ್ನೇಹಲತಾ, ಆಯುಕ್ತರು ಸ್ವಂತ ಕಾರಿನಲ್ಲಿ‌ ಕುಟುಂಬ ಸಮೇತ ಇದ್ದರು. ಈ ವೇಳೆ ಅವರು ಆಯುಕ್ತರು ಎಂದು ಹೇಗೆ ಗೊತ್ತಾಗುತ್ತದೆ. ಈ ಕಾರಣ ಶಾಸಕ ದೇವಾನಂದ ಚವ್ಹಾಣ ಹೆಸರು ತೆಗೆದುಕೊಂಡಿರಬಹುದು. ನಾನು‌ ಮತ ಹಾಕಿದ ಜನಪ್ರತಿನಿಧಿ ಬಳಿ ಕಷ್ಟದಲ್ಲಿ ಹೋಗಲೇ ಬೇಕಾಗುತ್ತದೆ ಎಂದು ತಮ್ಮ ಮಗನ ಧಮ್ಕಿ ಸಮರ್ಥಿಸಿಕೊಂಡರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.