ಮುದ್ದೇಬಿಹಾಳ: ಕೊರೊನಾ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರ ಕಠಿಣ ಕರ್ಫ್ಯೂ ಜಾರಿಗೊಳಿಸಿದ್ದು, ಬಸ್ ಬಂದ್ ಆಗಿದ್ದರಿಂದ ಕೆಲ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಹಾಸಿಗೆ ಹಾಸಿಕೊಂಡು ನೆಮ್ಮದಿಯಿಂದ ನಿದ್ದೆ ಮಾಡಿದ ದೃಶ್ಯ ನಗರದಲ್ಲಿ ಕಂಡು ಬಂತು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳೆದ ರಾತ್ರಿಯೇ ಬಸ್ ಓಡಾಟ ಸ್ಥಗಿತಗೊಳಿಸಲಾಗಿದ್ದು, ಬೇರೆ ಊರಿನಿಂದ ತಡರಾತ್ರಿ ಬಂದಿರುವ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಮಲಗುವ ಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಕೆಲ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಮಲಗಿದ್ದರು.
ಪ್ರಯಾಣಿಕರ ಪರದಾಟ...
ಬೆಂಗಳೂರಿಂದ ಬುಧವಾರ ಬಸ್ ಮೂಲಕ ಪಟ್ಟಣಕ್ಕೆ ಆಗಮಿಸಿದ ಕಾರ್ಮಿಕರು ತಮ್ಮೂರಿಗೆ ತೆರಳಲು ತೀವ್ರ ಪರದಾಟ ಅನುಭವಿಸಬೇಕಾಯಿತು. ದುಪ್ಪಟ್ಟು ಹಣ ನೀಡಿ ಖಾಸಗಿ ವಾಹನಗಳನ್ನು ಆಶ್ರಯಿಸಿ ಊರು ತಲುಪಿದರು.