ETV Bharat / state

ಓಡುತ್ತಲೇ ನಿಂತುಬಿಟ್ಟ ರೈಲು: ಸಿಬ್ಬಂದಿ ಮೇಲೆ ಪ್ರಯಾಣಿಕರ ಆಕ್ರೋಶ - ರೈಲು ಇಂಜಿನ್​

ಎಂಜಿನ್ ಕೆಟ್ಟುಹೋದ ಕಾರಣ ಮಾರ್ಗ ಮಧ್ಯದಲ್ಲೇ ರೈಲು ನಿಂತ ಘಟನೆ ಹುಬ್ಬಳ್ಳಿ- ರಾಯಚೂರು ಮಧ್ಯೆ ನಡೆದಿದೆ. ವಿಜಯಪುರದ ಮಿಂಚನಾಳ- ಕ್ಯಾತನಕೇರಿ ಗ್ರಾಮದ ಮಧ್ಯೆ ರೈಲು ಕೆಟ್ಟು ನಿಂತಿತ್ತು. ಬರೋಬ್ಬರಿ 3 ಗಂಟೆಗಳ ಕಾಲ ರೈಲು ನಿಂತ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

ಓಡುತ್ತಲೇ ನಿಂತ ಉಗಿಬಂಡಿ
author img

By

Published : Jul 13, 2019, 11:41 PM IST

ವಿಜಯಪುರ: ಎಂಜಿನ್ ಕೆಟ್ಟು ಹೋದ ಕಾರಣ ಮಾರ್ಗ ಮಧ್ಯದಲ್ಲೇ ರೈಲು ನಿಂತ ಘಟನೆ ಹುಬ್ಬಳ್ಳಿ- ರಾಯಚೂರು ಮಧ್ಯೆ ನಡೆದಿದೆ.

ವಿಜಯಪುರದ ಮಿಂಚನಾಳ-ಕ್ಯಾತನಕೇರಿ ಗ್ರಾಮದ ಮಧ್ಯೆ ರೈಲು ಕೆಟ್ಟು ನಿಂತಿತ್ತು. ಹೀಗಾಗಿ ಬರೋಬ್ಬರಿ 3 ಗಂಟೆಗಳ ಕಾಲ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

ಮಧ್ಯಾಹ್ನ ಈ ಘಟನೆ ನಡೆದಿದ್ದು ಸಂಜೆಯವರೆಗೂ ಪ್ರಯಾಣಿಕರು ಪರಿತಪಿಸಬೇಕಾಯಿತು. ನಂತರ ವಿಜಯಪುರದಿಂದ ಬೇರೆ ಇಂಜಿನ್ ತರಿಸಿಕೊಂಡು ಜೋಡಿಸಿದ ಮೇಲೆ ಮತ್ತೆ ರೈಲು ಪ್ರಯಾಣ ಬೆಳೆಸಿತು.

ರೈಲು ಗಾಡಿ ಕೆಟ್ಟು ನಿಂತ ಪರಿಣಾಮ ಅನಿವಾರ್ಯ ಕೆಲಸ ನಿಮಿತ್ತ ತೆರಳಬೇಕಿದ್ದ ಜನರು ರೈಲ್ವೆ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.