ವಿಜಯಪುರ: ಟಿಪ್ಪರ್ ಹಾಗೂ ಟಂಟಂ ನಡುವೆ ಡಿಕ್ಕಿಯಾಗಿ ಟಂಟಂ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಡೆದಿದೆ.
ಬಳ್ಳೊಳ್ಳಿ ಗ್ರಾಮದ ಪುಂಡಲೀಕ ಸಂಗೋಗಿ ಮೃತ ಟಂಟಂ ಚಾಲಕ ಎಂದು ಗುರುತಿಸಲಾಗಿದೆ. ಟಂಟಂನಲ್ಲಿ ಪ್ರಯಾಣಿಕರಿಲ್ಲದ ಕಾರಣ ಅನಾಹುತ ತಪ್ಪಿದೆ.
ಘಟನೆ ಹಿನ್ನೆಲೆ ಹೊರ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.