ETV Bharat / state

ಇಂದಿನಿಂದಲೇ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಪರೀಕ್ಷಾ ಲ್ಯಾಬ್ ಕಾರ್ಯಾರಂಭ.. - Throat Fluid Model Testing Lab Start

ಈವರೆಗೆ 1972 ಜನ ವಿವಿಧ ಪ್ರದೇಶಗಳಿಂದ ಬಂದ ಬಗ್ಗೆ ವರದಿಯಾಗಿದೆ. ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. 424 ಜನರು 28 ದಿನ ಪೂರ್ಣಗೊಳಿಸಿದ್ದಾರೆ. 1546 ರಿಪೋರ್ಟಿಂಗ್ ಅವಧಿಯಲ್ಲಿದ್ದು, 48 ಜನ ಆಸ್ಪತ್ರೆಯಲ್ಲಿ ಐಸೋಲೇಶನ್​​ನಲ್ಲಿದ್ದಾರೆ.

District Collector YS Patila
ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ
author img

By

Published : May 2, 2020, 12:32 PM IST

ವಿಜಯಪುರ: ಕೋವಿಡ್-19ಗೆ ಸಂಬಂಧ ಪಟ್ಟಂತೆ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವ ಟೆಸ್ಟಿಂಗ್ ಲ್ಯಾಬ್ ಇಂದಿನಿಂದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಎರಡು ಗಂಟೆಗೆ ನಾಲ್ಕರಂತೆ ಗಂಟಲು ದ್ರವ ಮಾದರಿಗಳ ಪರೀಕ್ಷಾ ಫಲಿತಾಂಶ ಇದರಿಂದ ಲಭ್ಯವಾಗಲಿದೆ. ಒಂದು ಸುತ್ತಿನಲ್ಲಿ ಒಂದು ದಿನಕ್ಕೆ 24 ಗಂಟಲು ದ್ರವ ಮಾದರಿಗಳ ಪರೀಕ್ಷೆಯ ಫಲಿತಾಂಶ ಈ ಲ್ಯಾಬ್‌ನಿಂದ ಲಭ್ಯವಾಗಲಿದೆ ಎಂದರು.

ಜಿಲ್ಲಾಧಿಕಾರಿ ವೈಎಸ್ ಪಾಟೀಲ್..

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಮತ್ತು ರಾಜ್ಯ ಸರ್ಕಾರದ ಮುತುವರ್ಜಿಯಿಂದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಈ ಲ್ಯಾಬ್ ಕಾರ್ಯಾರಂಭಗೊಳ್ಳುತ್ತಿದೆ. ತೀವ್ರ ಶ್ವಾಸಕೋಶ ತೊಂದರೆ ಸಂಬಂಧಿತ, ಕೋವಿಡ್-19 ಲಕ್ಷಣವುಳ್ಳ ಮತ್ತು ತುರ್ತು ಸಂದರ್ಭದಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಸಹಕಾರಿಯಾಗಲಿದೆ. ಉಳಿದ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಿ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದರು.

ಜಿಲ್ಲೆಗೆ ಈವರೆಗೆ 1972 ಜನರು ವಿವಿಧ ಪ್ರದೇಶಗಳಿಂದ ಬಂದ ಬಗ್ಗೆ ವರದಿಯಾಗಿದೆ. ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. 424 ಜನರು 28 ದಿನಗಳನ್ನು ಪೂರ್ಣಗೊಳಿಸಿದ್ದಾರೆ. 1546 ರಿಪೋರ್ಟಿಂಗ್ ಅವಧಿಯಲ್ಲಿದ್ದು, 48 ಜನರು ಆಸ್ಪತ್ರೆಯಲ್ಲಿ ಐಸೋಲೇಶನ್​​ನಲ್ಲಿದ್ದಾರೆ. ಈವರೆಗೆ 2073 ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 44 ಜನರು ಕೋವಿಡ್-19 ಪಾಸಿಟಿವ್ ವರದಿಯಾಗಿದೆ. 153 ಜನರ ಪರೀಕ್ಷಾ ವರದಿ ಬರಬೇಕಾಗಿದೆ. 1876 ಜನರ ವರದಿ ನೆಗೆಟಿವ್ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.