ETV Bharat / state

ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ: ಮುದ್ದೇಬಿಹಾಳದಲ್ಲಿ ಸಾವಿರಾರು ಹೆಕ್ಟೇರ್​ ಜಲಾವೃತ - ವಿಜಯಪುರ ಪ್ರವಾಹ ಸುದ್ದಿ

ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಆಲಮಟ್ಟಿ ಜಲಾಶಯದಿಂದ ಗುರುವಾರ ಸಂಜೆ 4.4 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇದರಿಂದ ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕಿನ ಕೆಲ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ.

muddebihala
ಮುದ್ದೇಬಿಹಾಳದಲ್ಲಿ ಸಾವಿರಾರು ಹೆಕ್ಟೇರ್​ ಬೆಳೆಗಳು ಜಲಾವೃತ
author img

By

Published : Jul 30, 2021, 1:45 PM IST

ವಿಜಯಪುರ: ಮಹಾರಾಷ್ಟ್ರದ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಮುದ್ದೇಬಿಹಾಳದಲ್ಲಿ ಸಾವಿರಾರು ಹೆಕ್ಟೇರ್​ ಬೆಳೆಗಳು ಜಲಾವೃತ

ಅಧಿಕ ಪ್ರಮಾಣದಲ್ಲಿ ನೀರು ಹರಿದುಬಂದ ಕಾರಣ ಆಲಮಟ್ಟಿ ಜಲಾಶಯದಿಂದ ಗುರುವಾರ ಸಂಜೆ 4.4 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇದರಿಂದ ಪ್ರವಾಹ ಮತ್ತಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ನದಿಪಾತ್ರದ ಗ್ರಾಮಗಳಾದ ಅರಳದಿನ್ನಿ, ಗಂಗೂರ, ಯಲಗೂರ, ಯಲ್ಲಮ್ಮನ ಬೂದಿಹಾಳ, ಕಾಶಿನಕುಂಟೆಯಲ್ಲಿ ಸಾವಿರಾರು ಹೆಕ್ಟೇರ್​ ಬೆಳೆಗಳಿಗೆ ನೀರು ನುಗ್ಗಿದೆ.

ಅರಳದಿನ್ನಿ ಹಾಗೂ ಗಂಗೂರ ಗ್ರಾಮಗಳ ನಡುವಿನ ರಸ್ತೆ ಜಲಾವೃತವಾಗಿದ್ದು, ಸಂಪರ್ಕ ಇಲ್ಲದೇ ಜನರು ಪರದಾಡುತ್ತಿದ್ದಾರೆ.‌ ಇದರ ಜೊತೆಗೆ ಲಕ್ಷಾಂತರ ಬೆಲೆಬಾಳುವ ಕಬ್ಬು, ಬಾಳೆ, ಸೂರ್ಯಕಾಂತಿ, ತೊಗರಿ ಸೇರಿದಂತೆ ನಾನಾ ಬಗೆಯ ಬೆಳೆಗಳು ನೀರಿನಲ್ಲಿ ಮುಳುಗಿವೆ.

ಸ್ಥಳಕ್ಕೆ ಭೇಟಿ ನೀಡಿದ ಸಂಬಂಧಪಟ್ಟ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ. ಆಲಮಟ್ಟಿ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬಂದರೆ ಇನ್ನೂ ಹಲವು ಗ್ರಾಮಗಳು ಜಲಾವೃತವಾಗಲಿವೆ. ಪರಿಸ್ಥಿತಿ ಅವಲೋಕಿಸಿ, ಗಂಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ: ಜನ ಬಯಸಿದರೆ ಮಾತ್ರ ರಾಜಕಾರಣಕ್ಕೆ ಬರುತ್ತೇನೆ: ನಟ ಅಭಿಷೇಕ್ ಅಂಬರೀಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.