ETV Bharat / state

ತರಕಾರಿ ಮಾರುಕಟ್ಟೆ ಬಂದ್ ಮಾಡಿಸಿದ ಪೊಲೀಸರು: ಸಾರ್ವಜನಿಕರಿಂದ ಅಸಮಾಧಾನ

ವಿವಾದಿತ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ‌ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆಗೆ ಮುಂದಾಗಿದ್ದಾರೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಬೇಕೆಂದು ಪೊಲೀಸರು ಸೂಚನೆ ನೀಡಿ ಮಾರುಕಟ್ಟೆಗಳಲ್ಲಿದ್ದ ವ್ಯಾಪಾರಿ ಹಾಗೂ ಗ್ರಾಹಕರನ್ನು ಹೋಗಲು ಸೂಚಿಸಿದರು.

The police closed the vegetable market in vijayapur
ತರಕಾರಿ ಮಾರುಕಟ್ಟೆ ಬಂದ್ ಮಾಡಿಸಿದ ವಿಜಯಪುರ ಪೊಲೀಸರು; ಸಾರ್ವಜನಿಕರಿಂದ ಅಸಮಧಾನ
author img

By

Published : Sep 25, 2020, 9:26 AM IST

ವಿಜಯಪುರ: ವಿವಾದಿತ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ‌ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೆದ್ದಾರಿ‌ ಬಂದ್ ಹೋರಾಟದ ಹಿನ್ನೆಲೆ ತರಕಾರಿ ಮಾರುಕಟ್ಟೆಯನ್ನು ಪೊಲೀಸರು ಬಂದ್ ಮಾಡಿಸಿರುವ ಘಟನೆ ಆದರ್ಶ ನಗರದಲ್ಲಿ ನಡೆದಿದೆ.

ತರಕಾರಿ ಮಾರುಕಟ್ಟೆ ಬಂದ್ ಮಾಡಿಸಿದ ಪೊಲೀಸರು

ರೈತರ ಹೋರಾಟವಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಬೇಕೆಂದು ಪೊಲೀಸರು ಸೂಚನೆ ನೀಡಿ ಅಲ್ಲಿದ್ದ ವ್ಯಾಪಾರಿಗಳು ಹಾಗೂ ಗ್ರಾಹಕರನ್ನು ಹೋಗಲು ಸೂಚಿಸಿದರು. ನಗರದ ಸೊಲ್ಲಾಪುರ ರಸ್ತೆ ಬಳಿಯ ಮಾರುಕಟ್ಟೆಗೆ ಹಳ್ಳಿಗಳಿಂದ ತರಕಾರಿ ಮಾರಾಟ ಮಾಡಲು ಬಂದಿದ್ದ ರೈತರನ್ನು ತೆರವು ಮಾಡಿಸಿದರು. ಪೊಲೀಸರ ಸೂಚನೆ ಮೇರೆಗೆ ತರಕಾರಿ ಗಂಟು‌ ಕಟ್ಟಿಕೊಂಡು ಮಾರುಕಟ್ಟೆಗೆ ಬಂದಿದ್ದ ರೈತರು ವಾಪಸ್ ತೆರಳಿದರು. ಪೊಲೀಸರ ಈ ಕ್ರಮಕ್ಕೆ ರೈತರು ಹಾಗೂ ತರಕಾರಿ ಖರೀದಿಗೆ ಬಂದ ಜನರು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.