ವಿಜಯಪುರ: ಕೊರೊನಾ ವಾರಿಯರ್ಗೆ ಪಾಸಿಟಿವ್ ಬಂದ್ರೂ ಚಿಕಿತ್ಸೆ ನೀಡಲು ಸಂಬಂಧಪಟ್ಟ ಇಲಾಖೆಯವರು ಮುಂದೆ ಬರದಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಕುರಿತು ಮನೆ ಮನೆಗೆ ಜಾಗೃತಿ ಮೂಡಿಸುತ್ತಿದ್ದ ಆಶಾ ಕಾರ್ಯಕರ್ತೆಗೆ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ಬೆಳಗ್ಗೆಯಿಂದ ಕಾದರೂ ಆ್ಯಂಬುಲೆನ್ಸ್ ಸಹ ಬಂದಿಲ್ಲ. ಕಾದು ಕಾದು ಆಶಾ ಕಾರ್ಯಕರ್ತೆ ಕಂಗಾಲಾಗಿರುವ ಅಮಾನವೀಯ ಘಟನೆ ನಡೆದಿದೆ. ಕೊರೊನಾ ಪಾಸಿಟಿವ್ ಬಂದಿರುವುದು ಬೆಳಗ್ಗೆಯೇ ಖಚಿತ ಆಗಿದ್ರೂ ಕನಿಷ್ಠ ವಾಹನದ ವ್ಯವಸ್ಥೆಯನ್ನು ಸಹ ಆರೋಗ್ಯ ಇಲಾಖೆ ಮಾಡಿಲ್ಲ ಎಂದು ಆರೋಪಿಸಲಾಗಿದೆ.
ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಇದೆಂಥಾ ವ್ಯವಸ್ಥೆ ಎನ್ನುವ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ.