ETV Bharat / state

ವಿಜಯಪುರ: ಹಿರಿಯ ನಾಯಕನಿಗೆ ಕೊಕ್, ಯುವ ಮುಖಂಡನಿಗೆ ಮಣೆ ಹಾಕಿದ ಕಾಂಗ್ರೆಸ್​ - ವಿಜಯಪುರ ಕಾಂಗ್ರೆಸ್​ ಅಭ್ಯರ್ಥಿ ಸುನೀಲಗೌಡ ಪಾಟೀಲ

ವಿಧಾನ ಪರಿಷತ್ ಚುನಾವಣೆಯ 17 ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದೆ. ಈ ಬಾರಿ ವಿಜಯಪುರದಿಂದ ಮಾಜಿ ಸಚಿವ ಎಂ.ಬಿ.ಪಾಟೀಲ ಸಹೋದರ ಸುನೀಲಗೌಡ ಪಾಟೀಲ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

Sunilagowda Patil
ಸುನೀಲಗೌಡ ಪಾಟೀಲ
author img

By

Published : Nov 22, 2021, 10:48 PM IST

ವಿಜಯಪುರ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ದ್ವಿಸದಸ್ಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ ಸಹೋದರ ಸುನೀಲಗೌಡ ಪಾಟೀಲ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೊಂದು ಸ್ಥಾನದಲ್ಲಿ ಸ್ಪರ್ಧೆ ನಡೆಸಲು ನಿರ್ಧರಿಸಿದ ಬೆನ್ನಲ್ಲೇ ಕಾಂಗ್ರೆಸ್ ಟಿಕೆಟ್​​​​ಗಾಗಿ ಎಸ್.ಆರ್.ಪಾಟೀಲ್ ಹಾಗೂ ಸುನೀಲಗೌಡ ಪಾಟೀಲ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಎಸ್.ಆರ್.ಪಾಟೀಲ್​​​ ಕೊನೆಯ ಬಾರಿ ಚುನಾವಣೆ ಎದುರಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಬಸನಗೌಡ ಪಾಟೀಲ ಯತ್ನಾಳ್​ ಜಯ ಗಳಿಸಿದ್ದರು.

congress candidate list
ಕಾಂಗ್ರೆಸ್​ ಅಭ್ಯರ್ಥಿಗಳ ವಿವರ

ನಂತರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ್​ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ 2018 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಜಯ ಸಾಧಿಸಿದ್ದರು. ತೆರವಾದ ಪರಿಷತ್ ಸದಸ್ಯ ಸ್ಥಾನಕ್ಕೆ ಸುನೀಲಗೌಡ ಪಾಟೀಲ ಸ್ಪರ್ಧೆ ಮಾಡಿ ಜಯಗಳಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿಯಾಗಿದ್ದರು.

ಈಗ ಮತ್ತೊಮ್ಮೆ ವಿಧಾನ ಪರಿಷತ್ ಚುನಾವಣೆ ಎದುರಾಗಿದ್ದು, ಈ ಬಾರಿ ಎಸ್.ಆರ್.ಪಾಟೀಲ ಅವರನ್ನು ಕಡೆಗಣಿಸಿ ಸುನೀಲ್​​ಗೌಡ ಪಾಟೀಲ್​ಗೆ ಕಾಂಗ್ರೆಸ್ ಹೈಕಮಾಂಡ್​​​ ಮಣೆ ಹಾಕಿದೆ. ಪ್ರತಿ ಬಾರಿ ಬಾಗಲಕೋಟೆ ಜಿಲ್ಲೆಯವರೆಗೆ ಕಾಂಗ್ರೆಸ್ ಟಿಕೆಟ್​ ನೀಡುತ್ತದೆ ಎಂಬ ಆಪಾದನೆಯಿಂದ ಪಾರಾಗಲು ಮುಂದಾಗಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆ: ಕೊನೆಗೂ ಕಾಂಗ್ರೆಸ್​ನಿಂದ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.