ETV Bharat / state

ವಿಜಯಪುರದಲ್ಲಿ ಸಂಡೇ ಲಾಕ್​ಡೌನ್ ಹೀಗಿತ್ತು - ವಿಜಯಪುರದಲ್ಲಿ ಕೊರೊನಾ ಪ್ರಕರಣ

ಮಹಾಮಾರಿ ಕೊರೊನಾ ವೈರಸ್ ತಡೆಯಲು ಸರ್ಕಾರ ಸಂಡೇ ಲಾಕ್‌‌ಡೌನ್ ಘೋಷಣೆ ಹಿನ್ನೆಲೆ ಗುಮ್ಮಟ ನಗರಿ ವಿಜಯಪುರ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿತ್ತು. ಅಲ್ಲದೆ ಪೊಲೀಸ್ ಬಿಗಿ ಬಂದೋಬಸ್ತ್‌ನಿಂದ ಕೂಡಿದೆ.

sdsd
ವಿಜಯಪುರದಲ್ಲಿ ಸಂಡೇ ಲಾಕ್​ಡೌನ್
author img

By

Published : Jul 12, 2020, 7:09 PM IST

ವಿಜಯಪುರ : ಇಂದು ಸಂಡೇ ಲಾಕ್​ಡೌನ್​ ಆಗಿರುವುದರಿಂದ ಗುಮ್ಮಟ ನಗರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ರಿಂದ ನಗರ ಸಂಪೂರ್ಣ ಸ್ತಬ್ಧವಾಗಿದೆ‌.

ವಿಜಯಪುರದಲ್ಲಿ ಸಂಡೇ ಲಾಕ್​ಡೌನ್

ಆದರೆ, ಕೆಲವು ರಸ್ತೆಗಳಲ್ಲಿ ಜನ ಸರ್ಕಾರ ಆದೇಶವನ್ನು ಧಿಕ್ಕರಿಸಿ ರಸ್ತೆಗಳಿದಿದ್ದರು. ಇಂತವರಿಗೆ ಪೊಲೀಸರು ಬುದ್ಧಿ ಹೇಳಿ ಮನೆಗೆ ಕಳುಹಿಸಿದರು. ಆಸ್ಪತ್ರೆ, ಮೆಡಿಕಲ್ ಹಾಗೂ ಅಗತ್ಯ ದಿನಸಿ ಸೇರಿ ತುರ್ತು ಸೇವೆಗಳಿಗೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಬೆಂಗಳೂರು ಮಾದರಿ ಜಿಲ್ಲೆಯಲ್ಲಿ ಕೂಡ ಒಂದು ವಾರದ ಲಾಕ್‌ಡೌನ್ ಜಾರಿ ಮಾಡುವಂತೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಇನ್ನೂ ಪಶ್ಚಿಮ ಬಂಗಾಳದಿಂದ ರೈಲು ಮೂಲಕ ಆಗಿಮಿಸಿದ 14 ಯುವಕರು ತಮ್ಮ ಊರಿಗೆ ತೆರಳಲು ಬಸ್ ವ್ಯವಸ್ಥೆಯಿಲ್ಲದೆ ಪರದಾಡಿದ್ದಾರೆ. ಬಳಿಕ ಕರ್ತವ್ಯದಲ್ಲಿದ್ದ ಪೊಲೀಸರು ಯುವಕರ ಸಂಬಂಧಿಗಳನ್ನ ಕರೆಯಿಸಿ ಆರೋಗ್ಯ ತಪಾಸಣೆ ಮಾಡಿಸುವಂತೆ ತಿಳಿ ಹೇಳಿದ್ದಾರೆ. ನಗರದಲ್ಲಿ 300ಕ್ಕೂ ಅಧಿಕ ಪೊಲೀಸರು ಲಾಕ್‌ಡೌನ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ನಗರದ ದೊಡ್ಡ ಮಾರುಕಟ್ಟೆ ಎಂದೇ ಹೆಸರಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಸಂಕೀರ್ಣದ ಎಲ್ಲ ಅಂಗಡಿಗಳು ಸಂಪೂರ್ಣ ಕ್ಲೋಸ್ ಆಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.