ETV Bharat / state

ಭಾನುವಾರ ಮಾತ್ರ ವಿಜಯಪುರ ಲಾಕ್‌ಡೌನ್.. ಡಿಸಿ ವೈ ಎಸ್‌ ಪಾಟೀಲ್​​

author img

By

Published : Jul 17, 2020, 3:30 PM IST

ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನಡೆಸಿದ ವಿಡಿಯೋ ಸಂವಾದ ಕುರಿತು ಚರ್ಚೆ ನಡೆದಿದೆ. ಆದರೆ, ಶನಿವಾರ ಸಹ ಲಾಕ್‌ಡೌನ್ ಮಾಡಬೇಕು ಎಂದು ಯಾವ ತಜ್ಞರ ಸಮಿತಿ ಸಲಹೆ ನೀಡಿಲ್ಲ..

sunday-lock-down-in-vijayapura
ವಿಜಯಪುರ ಜಿಲ್ಲೆ

ವಿಜಯಪುರ : ಲಾಕ್​ಡೌನ್ ಮಾಡಲು ಸರ್ಕಾರದ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸ್ಪಷ್ಟಪಡಿಸಿದರು.

ಲಾಕ್‌ಡೌನ್ ಕುರಿತು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾಹಿತಿ‌

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಂದು ವಾರ ಲಾಕ್‌ಡೌನ್ ನಿರ್ಧಾರ ಬೆನ್ನಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಶನಿವಾರ, ಭಾನುವಾರ ಲಾಕ್‌ಡೌನ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಡಿರುವ ಕುರಿತು ಪ್ರತಿಕ್ರಿಯೆ ನೀಡಿ, ಸರ್ಕಾರ ಶನಿವಾರವೂ ಸಹ ಲಾಕ್‌ಡೌನ್ ಮಾಡುವ ಕುರಿತು ಆದೇಶ ನೀಡಿಲ್ಲ. ರಾಜ್ಯದ 19 ಜಿಲ್ಲೆಯಲ್ಲಿ ಭಾನುವಾರ ಮಾತ್ರ ಲಾಕ್‌ಡೌನ್ ಮಾಡಲು ಸರ್ಕಾರ ಸೂಚಿಸಿದೆ. ಈಗಾಗಲೇ ಎರಡು ಭಾನುವಾರ ಲಾಕ್‌ಡೌನ್ ಮಾಡಲಾಗಿದೆ. ಈ ಭಾನುವಾರವೂ ಸಹ ಲಾಕ್‌ಡೌನ್ ಮುಂದುವರೆಸಲಾಗುವುದು ಎಂದರು.

ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನಡೆಸಿದ ವಿಡಿಯೋ ಸಂವಾದ ಕುರಿತು ಚರ್ಚೆ ನಡೆದಿದೆ. ಆದರೆ, ಶನಿವಾರ ಸಹ ಲಾಕ್‌ಡೌನ್ ಮಾಡಬೇಕು ಎಂದು ಯಾವ ತಜ್ಞರ ಸಮಿತಿ ಸಲಹೆ ನೀಡಿಲ್ಲ. ಸಚಿವರು ಸಹ ಅಗತ್ಯ ಬಿದ್ದರೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ ಹೊರತು, ಲಾಕ್‌ಡೌನ್ ಮಾಡಲು ಡಿಸಿಯವರೆಗೆ ಅಧಿಕಾರ ನೀಡಲಾಗಿದೆ ಎನ್ನುವುದು ತಪ್ಪು ಎಂದರು.

24 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಲಾಕ್‌ಡೌನ್ ವಿಚಾರದಲ್ಲಿ ಈ ರೀತಿ ಗೊಂದಲವಿರಬಾರದು. ಇದು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈಗಲೂ ಭಾನುವಾರ ಮಾತ್ರ ಲಾಕ್‌ಡೌನ್ ಇರಲಿದೆ ಎಂದು ಪುನರುಚ್ಚಿಸಿದರು.

ಲಾಕ್ ಡೌನ್ ವೇಳೆ : ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಳೆದ ಎರಡು ಭಾನುವಾರದಿಂದ ನೀಡಿರುವ ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಈ ಭಾನುವಾರವೂ ಸಹ ಲಾಕ್‌ಡೌನ್ ಮಾಡಲಾಗುತ್ತಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಲಾಕ್‌ಡೌನ್ ಇರಲಿದೆ ಎಂದು ಡಿಸಿ ಹೇಳಿದರು. ಸಾರ್ವಜನಿಕರ ಅಗತ್ಯ ವಸ್ತುಗಳ ವ್ಯಾಪಾರ, ವಹಿವಾಟು ಬಿಟ್ಟು ಬೇರೆ ಎಲ್ಲ ಬಂದ್ ಇರಲಿದೆ. ಸಾರ್ವಜನಿಕರು ಅಂದು ಅನಾವಶ್ಯಕವಾಗಿ ಮನೆಬಿಟ್ಟು ಹೊರಗೆ ಬರಬಾರದು ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.