ETV Bharat / state

ವಿಜಯಪುರದಲ್ಲಿ ಅಪ್ರಾಪ್ತ ವಯಸ್ಸಿನ ಪ್ರೇಮಿಗಳು ಆತ್ಮಹತ್ಯೆ - ಕೊಪ್ಪಳದಲ್ಲಿ ಯುವಕ ಬಾಲಕಿ ಸಾವು

ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ
ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ
author img

By

Published : May 3, 2023, 8:57 PM IST

ವಿಜಯಪುರ : ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. 17 ವರ್ಷದ ಹುಡುಗ ಹಾಗೂ 15 ವರ್ಷದ ಬಾಲಕಿ ಮೃತಪಟ್ಟವರು. ಪ್ರೇಮಿಗಳಿಬ್ಬರು ನಿನ್ನೆ ಮನೆಯಿಂದ ಹೊರ ಹೋಗುವುದಾಗಿ ಹೇಳಿ ಹೋಗಿದ್ದಾರೆ. ನಂತರ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಪ್ರಾಪ್ತ ವಯಸ್ಸಿನ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ನಿಗೂಢವಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸ್ ತನಿಖೆಯಿಂದಲೇ ತಿಳಿದು ಬರಬೇಕಿದೆ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರೀತಿ, ಗುಟ್ಟಾಗಿ ಮದುವೆ, ನಿಂದನೆ ಆರೋಪ.. ನವ ವಿವಾಹಿತ ಆತ್ಮಹತ್ಯೆಗೆ ಶರಣು!

ಕೊಪ್ಪಳದಲ್ಲಿ ಯುವಕ ಬಾಲಕಿ ಸಾವು: ಇನ್ನೊಂದೆಡೆ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾದ ಹಿನ್ನೆಲೆ ಯುವಕನೋರ್ವ ಅಪ್ರಾಪ್ತೆಯ ಮನೆಗೆ ತೆರಳಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ ಬಳಿಕ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ (ಜನವರಿ14-2023)ರಂದು ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ನಡೆದಿತ್ತು.

ಇದನ್ನೂ ಓದಿ : ಹುಡುಗಿ ಲವ್ ಮಾಡುವ ವಿಚಾರಕ್ಕಾಗಿ ಸ್ನೇಹಿತರಿಬ್ಬರ ಮಧ್ಯೆ ಗಲಾಟೆ : ಕೊಲೆಯಲ್ಲಿ ಅಂತ್ಯ

ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಬಾಲಕಿ ಹಾಗೂ ಪ್ರಕಾಶ ಭಜಂತ್ರಿ ಮೃತಪಟ್ಟವರು. ಇಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆ ಕೋಪಗೊಂಡ ಪ್ರಕಾಶ್​ ಶನಿವಾರ ಏಕಾಏಕಿ ಬಾಲಕಿಯ ಮನೆಗೆ ಬಂದು ಆಕೆಯನ್ನು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಎಸ್​ಪಿ ಅರುಣಾಗ್ಷು ಗಿರಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮೈಸೂರು: ಪ್ರೀತಿಸಿ ಮದುವೆ... 5 ತಿಂಗಳಲ್ಲೇ ಪ್ರೇಮಿಗಳ ಬದುಕು ಅಂತ್ಯ

'ಬಾಲಕಿ ಹಾಗೂ ಯುವಕನ ನಡುವಿನ ಪ್ರೇಮದ ವಿಚಾರ ಇವರಿಬ್ಬರ ಮನೆಯವರಿಗೆ ಕೆಲ ದಿನಗಳ ಹಿಂದೆ ಗೊತ್ತಾಗಿತ್ತು. ಬಳಿಕ ಎರಡೂ ಕಡೆಯವರು ದೂರವಾಗುವಂತೆ ಬುದ್ದಿಮಾತು ಹೇಳಿದ್ದರು. ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಅಪ್ರಾಪ್ತೆಯು ಪ್ರಕಾಶನಿಂದ ದೂರವಾಗಲು ಯತ್ನಿಸಿದ್ದಾಳೆ. ಆದರೂ ಕೂಡ ಯುವಕ ಪ್ರೀತಿಸುವುದನ್ನು ಬಿಟ್ಟಿರಲಿಲ್ಲ. ಅಪ್ರಾಪ್ತೆಗೆ ಪ್ರೀತಿ ಮಾಡುವಂತೆ ಒತ್ತಾಯಿಸುತ್ತಲೇ ಇದ್ದ' ಎಂದು ಎಸ್​ಪಿ ಹೇಳಿದ್ದರು.

ಇದನ್ನೂ ಓದಿ: ಬೆಳಗಾವಿ: ಕುಡಿದ ಅಮಲಿನಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಂದ ಮಹಿಳೆ

'ಬಾಲಕಿ ತನ್ನ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕೋಪಗೊಂಡಿದ್ದ ಪ್ರಕಾಶ್​ ಶನಿವಾರ ಚಾಕು ಸಮೇತ ಆಗಮಿಸಿ ಬಾಲಕಿಯನ್ನು ಕೊಲೆ ಮಾಡಿದ್ದಾನೆ.‌ ನಂತರ ಅದೇ ಚಾಕುವಿನಿಂದ ತನ್ನ ಕುತ್ತಿಗೆಯನ್ನು ತಾನೇ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದರು. ಘಟನೆ ಸಂಬಂಧ ಬಾಲಕಿಯ ತಾಯಿ ದೂರು ನೀಡಿದ್ದು, ಈ ಸಂಬಂಧ ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ' ಎಂದು ಎಸ್​ಪಿ ತಿಳಿಸಿದ್ದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಯುವಕ - ಬಾಲಕಿ ಸಾವು, ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.