ವಿಜಯಪುರ: ತರಗತಿಯಲ್ಲಿ ಹಿಜಾಬ್ಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಕೆಲ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ವಾಪಸ್ ತೆರಳಿದ ಘಟನೆ ನಗರದ ಸರ್ಕಾರಿ ಮಹಿಳಾ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ನಡೆಯಿತು.
20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ, ನಮ್ಮ ಮುಂದಿನ ಪೀಳಿಗೆಗೆ ಹಿಜಾಬ್ ಅನ್ನು ಉಳಿಸಬೇಕಿದೆ. ಹೈಕೋರ್ಟಿನ ಅಂತಿಮ ತೀರ್ಪು ಬರುವವರೆಗೂ ನಾವು ಹಿಜಾಬ್ ತೆಗೆಯಲ್ಲ. ತರಗತಿಯಲ್ಲಿ ಹಿಜಾಬ್ಗೆ ಅವಕಾಶ ನೀಡದ ಕಾರಣ ತರಗತಿಗಳನ್ನು ಬಹಿಷ್ಕರಿಸಿದ್ದೇವೆ. ತರಗತಿ ಹಾಗೂ ಪರೀಕ್ಷೆ ಬಿಡುತ್ತೇವೆ ಆದರೆ ಹಿಜಾಬ್ ಬಿಡಲ್ಲ. ನಮಗೆ ಹಿಜಾಬ್ ಮುಖ್ಯ ಎಂದು ವಿದ್ಯಾರ್ಥಿನಿಯರು ಪ್ರತಿಕ್ರಿಯೆ ನೀಡಿದರು.
ನಿಷೇಧಾಜ್ಞೆ ಜಾರಿ: ನಗರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಹಾಗೂ ಪೋಷಕರು ನಿನ್ನೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಬಳಿ 144 ಸೆಕ್ಷನ್ ಅನ್ವಯ ಫೆ.19ರವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಇತರೆ ಶಾಲಾ ಕಾಲೇಜುಗಳಲ್ಲಿಯೂ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಲ್ಲ ಎಂದ ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಮೊದಲ ಪತ್ನಿಗೆ ಪತಿ ವಿಚ್ಛೇದನ ನೀಡದಿದ್ದರೆ 2ನೇ ಪತ್ನಿ ಪಿಂಚಣಿಗೆ ಅರ್ಹಳಲ್ಲ: ಬಾಂಬೆ ಹೈಕೋರ್ಟ್